ಧಾರವಾಡ ದ ರಾಯಾಪೂರ ದಲ್ಲಿ ಚರಂಡಿ ಕಾಮಗಾರಿ ಗೆ ಭೂಮಿ ಪೂಜೆ – ಶಾಸಕ ಅರವಿಂದ ಬೆಲ್ಲದ ಸೇರಿ ಹಲವರು ಉಪಸ್ಥಿತಿ…..

Suddi Sante Desk

ಹುಬ್ಬಳ್ಳಿ ಧಾರವಾಡ –

ಹುಬ್ಬಳ್ಳಿ -ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ ನಂ 24 ರ ರಾಯಾಪುರ ಗ್ರಾಮದ ಕೆರೆಯಿಂದ ನಂದಿನಿ ಬಡಾವಣೆಯವರೆಗೆ ತೆರೆದ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಈ ಒಂದು ಕಾಮಗಾರಿ ಗೆ ಗ್ರಾಮಸ್ಥರೊಂದಿಗೆ ಶಾಸಕ ಅರವಿಂದ ಬೆಲ್ಲದ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.ಇನ್ನೂ ಈ ಒಂದು ಸಮಯದಲ್ಲಿ ಶಾಸಕರಾದ ಅಭಿವೃದ್ಧಿ ಹರಿಕಾರ ಅರವಿಂದ ಬೆಲ್ಲದ ಇವರೊಂದಿಗೆ

ಕೆ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ,ಮಾಜಿ ಪಾಲಿಕೆ ಸದಸ್ಯರಾದ ಶಿವಣ್ಣ ಬಡವಣ್ಣನವರ,ಮುಖಂಡರಾದ ಎಸ್.ಪಿ. ಪಾಟೀಲ್ ,ಮಲ್ಲಪ್ಪ ನಾಗರಳ್ಳಿ,ರುದ್ರಪ್ಪ ಬೆಟಗೇರಿ, ಗಿರೀಶ್ ಸವಡಿಜೋಶಿ,ಸಂತೋಷ ಸೋಗಿ, ಸಂಜಯ ಕಪಟಕರ, ಶಿವಾನಂದ ನಾರಾಯಣ ಪುರ,ಡಾ. ವಿಜಯ ಕುಮಾರ್ ಅಪ್ಪಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.