ಧಾರವಾಡ –
ಜುಲೈ 26 ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ದೇಶಕ್ಕಾಗಿ ಬಲಿದಾನಗೈದ ವೀರಯೋಧರ ಸ್ಮರಣೆ ಗಾಗಿ ಇಂದು ಬಿಜೆಪಿ ಧಾರವಾಡ ನಗರ 71ಘಟಕದ ವತಿಯಿಂದ ಶಾಸಕರು ಅಮೃತ ದೇಸಾಯಿಯವರು ಕಾರ್ಗಿಲ ಸ್ಥೂಪಕ್ಕೆ ತೆರಳಿ ಪುಷ್ಪ ನಮನಗಳನ್ನು ಅರ್ಪಿಸಿ ಗೌರವ ನಮನಗಳನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ದೇಶದ ಸುರಕ್ಷತೆ ಭದ್ರತೆಗಾಗಿ ಪ್ರಾಣದ ಹಂಗು ತೊರೆದು ವೀರಾವೇಶದಿಂದ ಹೋರಾಡಿ ಪ್ರಾಣ ಅರ್ಪಿಸಿ ಶೌರ್ಯ ಮೆರೆದ ಸೈನಿಕರಿಗೆ ನಾವೆಂದು ಚಿರರುಣಿ ಹಾಗು ಇವತ್ತು ದೇಶದ ಬಾವುಟ ಹಾರುತ್ತಿರುವದು ದೇಶದ ಹೆಮ್ಮೆಯ ಸೈನಿಕರಿಂದ ಅಂತ ನುಡಿದು ಭಾರತ ವೈರಿ ರಾಷ್ಟ್ರಗಳಿಗೆ ತಕ್ಕ ಉತ್ತರ ನೀಡುತ್ತದೆ ಎಂದರು

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಈರೇಶ ಅಂಚಟಗೇರಿ ಸುನೀಲ ಮೋರೆ ಶ್ರೀನಿವಾಸ ಕೋಟ್ಯಾನ ಹರೀಶ ಬಿಜಾಪುರ ರಘು ತೇರದಾಳ ಕಿರಣ ಉಪ್ಪಾರ, ಶಕ್ತಿ ಹಿರೇಮಠ ಮಂಜು ಕಮ್ಮಾರ, ರಾಜೇಶ್ವರಿ ಅಳಗವಾಡಿ, ಶಂಕರ ಶೇಳಕೆ, ನಿರ್ಮಲಾ ಜವಳಿ ಹಾಗು ಬಿಜೆಪಿ ಪದಾಧಿ ಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು