ಗರಗ –
ಧಾರವಾಡ ಗರಗ ಗುರು ಮಡಿವಾಳೇಶ್ವರ ಮಠದಿಂದ ಶಾಸಕ ಅಮೃತ ದೇಸಾಯಿ ನೇತೃತ್ವದಲ್ಲಿ ಉಳವಿ ವರೆಗೆ ಪಾದಯಾತ್ರೆ ಆರಂಭಗೊಂಡಿದೆ.ಹೌದು ಕಳೆದ ಐದು ವರ್ಷಗಳಿಂದ ಈ ಒಂದು ಪಾದಯಾತ್ರೆ ನಡೆದುಕೊಂಡು ಬರುತ್ತಿದೆ
ಇನ್ನೂ ಐದನೇಯ ವರ್ಷದ ಪಾದಯಾತ್ರೆ ಗರಗ ದ ಗುರು ಮಡಿವಾಳೇಶ್ವರ ಮಠದಿಂದ ಆರಂಭಗೊಂಡಿತು ಪಾದಯಾತ್ರೆ ಮುನ್ನ ಮಠದ ಮುಂದೆ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವಿವಿಧ ಮಠಾಧೀಶರಿಗೆ ಶಾಸಕ ಅಮೃತ ದೇಸಾಯಿ ಮತ್ತು ಪರಿವಾರದವರು ಮಠಾಧೀ ಶರಿಗೆ ಸನ್ಮಾನಿಸಿ ಗೌರವಿಸಿದರು ನಂತರ ಪಾದಯಾತ್ರೆ ಆರಂಭವಾಯಿತು
ಗರಗ ಮಠದಿಂದ ಅಪಾರ ಪ್ರಮಾಣದ ಗ್ರಾಮಸ್ಥರ ಮತ್ತು ಅಭಿಮಾನಿಗಳ ನಡುವೆ ಮಠಾಧೀಶರು ಪಾದಯಾತ್ರೆ ಗೆ ಚಾಲನೆ ನೀಡಿದರು. ಇದೇ ವೇಳೆ ಸ್ವಾಮಿಜಿಗಳು ಮಾತನಾಡಿ ಶುಭ ಹಾರಿಸಿದರು
ಗರಗ ಮಠದಿಂದ ಉಳವಿ ಮಠದವರೆ ಈ ಒಂದು ಪಾದಯಾತ್ರೆ ನಡೆಯಲಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರು ಸಾರ್ವಜನಿಕರು ದೇಸಾಯಿ ಕುಟುಂಬದವರೊಂದಿಗೆ ಪಾದಯಾತ್ರೆ ಯಲ್ಲಿ ಹೆಜ್ಜೆ ಹಾಕತಾ ಇದ್ದಾರೆ.