ಬೆಳಗಾವಿ –
ಗಡಿ ವಿಚಾರದಲ್ಲಿ ಪದೇ ಪದೇ ತಂಟೆಯನ್ನು ಮಾಡುತ್ತಿ ರುವ MES ನವರು ಈಗ ಶೈಕ್ಷಣಿಕ ಕ್ಷೇತ್ರದಲ್ಲೂ ವಿಷ ಬೀಜ ಬಿತ್ತಲು ಮುಂದಾಗಿದ್ದಾರೆ ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ಶುಭಂ ಶೆಳಕೆ DDPI ಕಚೇರಿಯಲ್ಲಿ ಪುಂಡಾಟ ಮಾಡಿದ್ದಾರೆ ಇವರ ಈ ಒಂದು ಪುಂಡಾಟಕ್ಕಿಲ್ಲಾ ಬ್ರೇಕ್ ಇಲ್ಲದಂತಾಗಿದೆ.

ಗಡಿ ವಿವಾದ ಆಯ್ತು ಸರ್ಕಾರಿ ಕಚೇರಿಗೂ ನುಗ್ಗಿ ಪುಂಡಾಟಿಕೆಯನ್ನು ಮಾಡಿದ್ದಾರೆ.ಸಾಮಾಜಿಕ ಜಾಲತಾಣ ಗಳಲ್ಲಿ ಅಬ್ಬರಿಸಿ ಬೊಬ್ಬರಿಯುತ್ತಿದ್ದಾತ ಈಗ ಸರ್ಕಾರಿ ಕಚೇರಿಯಲ್ಲೂ ಪುಂಡಾಟಿಕೆಯನ್ನು ಮಾಡಿದ್ದಾರೆ.ಶಿಕ್ಷಣ ಇಲಾಖೆ ಸಿಆರ್‌ಪಿ ಕೌನ್ಸಲಿಂಗ್‌ನಲ್ಲಿ ಮರಾಠಿ ಶಾಲೆಗೆ ಕನ್ನಡಿಗ ಸಿಆರ್‌ಪಿ ನಿಯೋಜನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಈ ಒಂದು ಗಲಾಟೆ ಯನ್ನು ಮಾಡಿದ್ದಾರೆ
ಮರಾಠಿ ಶಿಕ್ಷಕರ ಮೇಲೆ ಕನ್ನಡ ಹೇರಿಕೆ ಮಾಡಲಾಗ್ತಿದೆ ಅಂತಾ ಆರೋಪದ ಹಿನ್ನೆಲೆಯಲ್ಲಿ ಈ ಒಂದು ಗಲಾಟೆ ಯನ್ನು ಮಾಡಲಾಗಿದೆ.ಬೆಳಗಾವಿ ಡಿಡಿಪಿಐ ಕಚೇರಿಗೆ ನುಗ್ಗಿ ಎಂಇಎಸ್ ಪುಂಡರು ಪುಂಡಾಟಿಕೆಯನ್ನು ಮಾಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲೂ ಭಾಷಾ ವೈಷಮ್ಯ ವಿಷಬೀಜ ಬಿತ್ತಲು ಎಂಇಎಸ್ ಯತ್ನವನ್ನು ಮಾಡಲಾಗುತ್ತಿದೆಯಾ ಎಂಬ ಮಾತುಗಳು ಈ ಒಂದು ಘಟನೆ ಯಿಂದ ಸಾಬೀತಾಗಿದೆ

ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಅಧಿಕಾರಿ ಮನವಿ ಪತ್ರ ಕೇಳ್ತಿದ್ದಾರೆ ಅಂತಾ ಆಕ್ರೋಶವನ್ನು ವ್ಯಕ್ತಪಡಿಸಿದರು.ಈ ಒಂದು ವಿಚಾರ ದಲ್ಲಿ ಸ್ಪಂದಿಸದಿದ್ದರೆ ಮರಾಠಿ ಶಿಕ್ಷಕರೆ ಲ್ಲರನ್ನೂ ಸೇರಿಸಿ ಪ್ರತಿಭಟನೆ ಮಾಡೋದಾಗಿ ಬೆದರಿಕೆ ಯನ್ನು ನೀಡಿದರು.ಮೂರು ದಿನಗಳ ಹಿಂದೆ ಈ ಒಂದು ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಪದೇಪದೇ ಪುಂಡಾಟಿಕೆ ಪ್ರದರ್ಶಿಸುತ್ತಿರುವ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಕ್ರಮವನ್ನು ಕೈಗೊಳ್ಳದ ರಾಜ್ಯ ಸರ್ಕಾರ.ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ವೇಳೆ ಪುಂಡಾಟಿಕೆ ಮೆರೆದಿದ್ದರು ಎಂಇಎಸ್ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದರೂ ಪುಂಡಾ ಟಿಕೆ ನಿಲ್ಲಸದ ಶುಭಂ ಶೆಳಕೆ.ದೇಶದ್ರೋಹ ಪ್ರಕರಣ ದಾಖಲಿಸಿದ್ದರು ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ಕೈ ಬಿಟ್ಟಿದ್ದೆ ತಪ್ಪಾಯ್ತಾ ಎನ್ನುವ ಮಾತು ಈಗ ಮತ್ತೊಮ್ಮೆ ಸಾಬೀತಾ ಗಿದೆ.ಈಗಾಗಲೇ ಪೊಲೀಸರು ಎಚ್ಚರಿಕೆ ನೀಡಿದರೂ ಪೋಸ್ಟ್ ಡಿಲೀಟ್ ಮಾಡದ ಶುಭಂ ಶೆಳಕೆ.ಈ ಹಿಂದೆ ಕೋವಿಡ್ ವೇಳೆ ಜಿಲ್ಲಾಸ್ಪತ್ರೆಗೆ ನುಗ್ಗಿ ಪುಂಡಾಟಿಕೆ ಪ್ರದರ್ಶಿ ಸಿದ್ದ ಶುಭಂ ಶೆಳಕೆ.ಎಂಇಎಸ್ ಪುಂಡ ಶುಭಂ ಶೆಳಕೆ ವಿರುದ್ಧ ಕಠಿಣ ಕ್ರಮಕ್ಕೆ ಕನ್ನಡಿಗರ ಒತ್ತಾಯವನ್ನು ಮಾಡಿದರು.