ಕಲಘಟಗಿ –
ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಂದ ಪುರಿ ಮಹಾಸ್ವಾಮಿ ಗಳ ಸತ್ಯಾಗ್ರಹ ಬೆಂಬಲಿಸಿ ಎಸ್ಸಿ ಎಸ್ಟಿ ಜನಾಂಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನಾ ಹೋರಾಟ ಮಾಡಲಾಗುವುದು ಎಂದು ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ರಮೇಶ್ ಸೋಲಾರಗೋಪ್ಪ ಹೇಳಿದರು.ಈ ಕುರಿತು ಕಲಘಟಗಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗ ಮೋಹನದಾಸ ವರದಿ ಜಾರಿಗೆ ಆಗಬೇಕು ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಜನ ಸಂಖ್ಯೆಗೆ ಅನುಗುಣವಾಗಿ ಸಂವಿಧಾನದ ಬದ್ಧವಾಗಿ ಮೀಸಲಾತಿ ನೀಡಿಲ್ಲ ಕರ್ನಾಟಕ ರಾಜ್ಯ ಪರಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸ ಲಾತಿ ಹೆಚ್ಚಳಕ್ಕಾಗಿ ವಾಲ್ಮೀಕಿ ಗುರುಪೀಠದ ಶ್ರೀಗಳು ಬೆಂಗಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದಿಗೆ 96 ದಿನಗಳು ಕಳೆದರೂ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.

ಆದ್ದರಿಂದ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಮೂಲಕ ಪರಿಶಿಷ್ಟ ಜಾತಿಗೆ 15 ರಿಂದ 17.5 ಮೀಸಲಾತಿ ಪರಿಶಿಷ್ಟ ಪಂಗಡದವರಿಗೆ 3 .ರಿಂದ 7.5 ಮೀಸಲಾತಿ ಹೆಚ್ಚಿಸುವಂತೆ ರಾಜ್ಯ ಸರಕಾರಕ್ಕೆ ಒತ್ತಾಯಿಸಿ ಮೇ 20 ರಂದು ಶುಕ್ರವಾರ ಕಲಘಟಗಿ ತಾಲೂಕಿನಾದ್ಯಂತ ಎಸ್ಸಿ ಎಸ್ಟಿ ಸಮುದಾಯದ ಮುಖಂಡರು ಮತ್ತು ಪ್ರಗತಿ ಪರ ಸಂಘಟನೆಗಳು ದಲಿತ ಸಂಘರ್ಷ ಸಮಿತಿ, ಅಂಬೇ ಡ್ಕರ್ ಬಣದ ಪದಾಧಿಕಾರಿಗಳು ಸೇರಿ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಗಿದೆ ಪಟ್ಟಣದ ಎಪಿಎಂಸಿಯಿಂದ ತಾಲೂಕು ತಹಶೀಲ್ದಾರ ಕಚೇರಿವರೆಗೆ ಮೆರವಣಿಗೆ ಮೂಲಕ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ನಂತರ ತಾಲೂಕು ತಹಶೀಲ್ದಾ ರರಿಗೆ ಮನವಿ ಸಲ್ಲಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಪಕ್ಕೀರಗೌಡ ದೊಡ್ಡಮನಿ ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಬಸವರಾಜ ಕಟ್ಟಿಮನಿ ದಲಿತ ಸಂಘರ್ಷ ಅಧ್ಯಕ್ಷ ಮಂಜುನಾಥ ದೊಡ್ಡಮನಿ ಹೊಳೆಪ್ಪ ಗಾಮಣ್ಣವರ ಪಕ್ಕೀರೇಶ ಅಪ್ಪಣ್ಣವರ ಶಶಿಕುಮಾರ್ ಕಟ್ಟಿಮನಿ ಲಕ್ಷ್ಮಣ ಮ್ಯಾಗೀನಮನಿ ಮಂಗಲಪ್ಪ ಲಮಾಣೆ ಬಸಪ್ಪ ವಡ್ಡರ ಬೀಮಣ್ಣ ಬ್ಯಾಡರಕೋಪ್ಪ ಸಿದ್ದಪ್ಪ ತಳವಾರ ಬೀಮಸಿ ರೇವಡಿಹಾಳ ಮಂಜುನಾಥ ಮಾದರ ಬಸವರಾಜ ಮಾದರ ಯಲ್ಲಪ್ಪ ಮೇಲಿನಮನಿ ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರು ಉಪಸ್ಥಿರಿದ್ದರು.