ಹುಬ್ಬಳ್ಳಿ –
ಮೆಡಿಸಿನ್ ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಅಗಡಿ ಕ್ರಾಸ್ ನಲ್ಲಿ ನಡೆದಿದೆ.

ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ 4 ರಲ್ಲಿನ ಸರ್ವಿಸ್ ರಸ್ತೆಯಲ್ಲಿ ಈ ಒಂದು ಅಪಘಾತವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೆಡಿಸನ್ ಗಳನ್ನು ತಗೆದುಕೊಂಡು ಗೋವಾ ದಿಂದ ಬೆಂಗಳೂರು ಕಡೆಗೆ ಈ ಒಂದು ಲಾರಿ ಹೊರಟಿತ್ತು.

ಸರ್ವಿಸ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ ನೆಲಕ್ಕುರುಳಿ ಬಿದ್ದಿದ್ದು ಘಟನೆಯಲ್ಲಿ ಒರ್ವನಿಗೆ ಗಾಯವಾಗಿದ್ದು ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಹೊರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಲಾರಿ ಹೇಗೆ ಪಲ್ಟಿಯಾಗಿದೆ ಕಾರಣ ಏನು ಎಂಬ ಕುರಿತಂತೆ ಮಾಹಿತಿಯನ್ನು ಕಲೆಹಾಕುತ್ತಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
