ಧಾರವಾಡ –
ಇದೊಂದು ಅಲ್ಪ ದರಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ಬಾಡಿಗೆ ವಸೂಲಿ ಮಾಡುತ್ತಿರುವ ಕಥೆ ಹೌದು ಲಕ್ಷ ಲಕ್ಷ ಬಾಡಿಗೆ ಪಾವತಿ ಲೆಕ್ಕಾ ಹೇಳಿದ್ರು ಮೌನವಾಗಿದ್ದಾರೆ ಇಲಾಖೆಯ ಅಧಿಕಾರಿಗಳು ಇಲಾಖೆಯ ಹೆಸರಿನಲ್ಲಿ ಹೊಸ ಬಸ್ ನಿಲ್ದಾಣ ದಲ್ಲಿ ನಡೆಯುತ್ತಿದೆ ವಸೂಲಿ ಈ ಒಂದು ಕುರಿತು ಬಾಡಿಗೆ ಪಾವತಿಸುವ ದಾಖಲೆ ನೀಡಿ ದರು ಇಲಾಖೆಯ ಅಧಿಕಾರಿಗಳು ಮಾತ್ರ ಮೌನ ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಏನು ಮಾಡಿದ್ರು ನಡೆಯುತ್ತದೆ ಹೇಳೊರಿಲ್ಲ ಕೇಳೊರಿಲ್ಲ.
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಹೊಸ ಟೆಂಡರ್ ನ್ನು ಕೇವಲ 1 ಲಕ್ಷ 91 ಸಾವಿರ ರೂಪಾಯಿಗೆ ಟೆಂಡರ್ ತಗೆದುಕೊಂಡಿದ್ದಾರೆ.ಟೆಂಡರ್ ತಗೆದುಕೊಂಡು ಈಗಾಗಲೇ ಹೇಳಿದಂತೆ ಒಂದು ಹೊಟೇಲ್ ಗೆ ಎರಡೂ ವರೆ,ಧಾರವಾಡ ಫೇಮಸ್ ಪೇಢಾ ಮಳಿಗೆಗೆ ಎರಡೂ ಲಕ್ಷ 10 ಸಾವಿರ ಇನ್ನೂಳಿದಂತೆ ಲಾಡ್ಜ್ ರೂಮ್ಸ್,ಹಾಗೆ ಹತ್ತಕ್ಕೂ ಹೆಚ್ಚು ಅಂಗಡಿಗಳಿದ್ದು ಇದೆಲ್ಲಾ ಸೇರಿದರೆ ಪ್ರತಿ ತಿಂಗಳು ಹತ್ತಕ್ಕೂ ಹೆಚ್ಚು ಲಕ್ಷ ಗಳಾಗುತ್ತದೆ
ಪ್ರತಿ ತಿಂಗಳು 10 ಲಕ್ಷಕ್ಕೂ ಹೆಚ್ಚು ಬಾಡಿಗೆ ಆದಾಯ ಬರುತ್ತದೆ.ಆದರೆ ಅಲ್ಪ ದರಕ್ಕೆ ಟೆಂಡರ್ ತಗೆದು ಕೊಂಡಿರುವ ವ್ಯಕ್ತಿಯೊಬ್ಬರು ಸಧ್ಯ ಪ್ರತಿ ತಿಂಗಳು ಹತ್ತಾರು ಲಕ್ಷ ರೂಪಾಯಿ ಬಾಡಿಗೆಯನ್ನು ವಸೂಲಿ ಮಾಡುತ್ತಿದ್ದಾರೆ.ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ತಾವು ನಿಗದಿ ಮಾಡಿದ ಹಣಕ್ಕೆ ವಾಣಿಜ್ಯ ಮಳಿಗೆಯ ಅಂಗಡಿಗಳನ್ನು ಬಾಡಿಗೆ ನೀಡಿ ದುಡಿದು ತಿನ್ನುವವರಿಗೆ ಹೆಚ್ಚಿನ ಬಾಡಿಗೆ ಹೊರೆ ಮಾಡಿದ್ದಾರೆ
ಯಾವುದೇ ಬಾಡಿಗೆಯನ್ನು ನಿಗದಿ ಮಾಡಲು ಒಂದಿಷ್ಟು ನಿಯಮಗಳು ಇವೆ ಅದರಲ್ಲೂ ಸರ್ಕಾರಿ ಸ್ಥಳದಲ್ಲಿ ಅಂದರೆ ಇನ್ನೂ ತುಂಬಾ ಕಟ್ಟುನಿಟ್ಟು ಹೀಗಿರುವಾಗ ಯಾವುದೇ ನಿಮಯಗಳನ್ನು ಲೆಕ್ಕಿಸದೇ ಬಾಯಿಗೆ ಬಂದಂತೆ ಹಾಗೆ ಲಕ್ಷ ಲಕ್ಷ ಬಾಡಿಗೆಯನ್ನು ಫೀಕ್ಸ್ ಮಾಡಿ ಬಾಡಿಗೆ ನೀಡಿ ವಸೂಲಿ ಮಾಡುತ್ತಿದ್ದಾರೆ.ಸುದ್ದಿ ಸಂತೆ ಟೀಮ್ ಈ ಒಂದು ವಿಚಾರವನ್ನು ಬೆಳಕಿಗೆ ತಗೆದು ಕೊಂಡು ಬಂದ ನಂತರ ಲಕ್ಷ ಲಕ್ಷ ಬಾಡಿಗೆ ಕೋಡುತ್ತಿರು ವವರನ್ನು ಕರೆಯಿಸಿ ಸಾರಿಗೆ ಇಲಾಖೆಯ ಅಧಿಕಾರಿಗಳು ವಿಚಾರಿಸಿದ್ದಾರೆ
ಬಾಡಿಗೆ ನೀಡುತ್ತಿರುವ ಕುರಿತಂತೆ ದಾಖಲೆಯನ್ನು ಕೂಡಾ ಅಧಿಕಾರಿಗಳ ಬಳಿ ಕೂಡಾ ನೀಡಿದ್ದಾರೆ ಇದೇಲ್ಲಾ ಕಂಪ್ಲೀಟ್ ಮಾಹಿತಿಯನ್ನು ಪಡೆದುಕೊಂಡ ಅಧಿಕಾರಿ ಗಳು ಬೇಕಾಬಿಟ್ಟಿಯಾಗಿ ಬಾಡಿಗೆಯನ್ನು ವಸೂಲಿ ಮಾಡುತ್ತಿರುವರ ಮೇಲೆ ಕಡಿವಾಣವನ್ನು ಹಾಕದೇ ದಾಖಲೆಗಳನ್ನು ನೋಡಿ ಟೆಂಡರ್ ಹಿಡಿದು ಹೆಚ್ಚಿನ ಬಾಡಿಗೆ ತೆಗೆದುಕೊಳ್ಳುತ್ತಿರುವವರ ಮೇಲೆ ಕ್ರಮ ಕೈಗೊಳ್ಳದ ಇಲಾಖೆಯ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ
ಇದ್ಯಾವ ನ್ಯಾಯ ಸ್ವಾಮಿ ಇನ್ನಾದರೂ ನೋಡಿ ಸಮಸ್ಯೆ ಪರಿಹಾರ ಮಾಡುವ ಪ್ರ್ರಯತ್ನ ಮಾಡಿ ಮಾಡಿ ಅಂದಾಗ ಮಾತ್ರ ವ್ಯಾಪಾರಿಗಳು ಸಂತೋಷ ಪಡುತ್ತಾರೆ
ಸುದ್ದಿ ಸಂತೆ ನ್ಯೂಸ್ ಧಾರವಾಡ……