ಧಾರವಾಡ –
ಧಾರವಾಡ ಜಿಲ್ಲಾಡಳಿತ,ಸಮಾಜ ಕಲ್ಯಾಣ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏಪ್ರಿಲ್ 5 ರಂದು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಮ್ ಹಾಗೂ ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಗಳನ್ನು ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲಾ ಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎರಡೂ ಜಯಂತಿ ಕಾರ್ಯಕ್ರಮಗಳನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗುವುದು.ಡಾ. ಬಾಬುಜ ಗಜೀವನರಾಮ್ ಜಯಂತಿ ಹಾಗೂ ಡಾ.ಬಿ.ಆರ್. ಅಂಬೇ ಡ್ಕರ್ ಜಯಂತಿದಿನಗಳಾದ ಕ್ರಮವಾಗಿ ಏ.5 ಹಾಗೂ ಏ.14 ರಂದು ಬೆಳಿಗ್ಗೆ 8 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಕಲಾತಂಡಗಳು ಹಾಗೂ ಮಹಾತ್ಮರ ಭಾವಚಿತ್ರದ ಮೆರವಣಿಗೆ ಪ್ರಾರಂಭವಾಗುವುದು.ವೀರ ಸಿಂಧೂರ ಲಕ್ಷ್ಮಣ ವೃತ್ತ(ಕೋರ್ಟ್ ಸರ್ಕಲ್) ಸಂಗಮ್ ವೃತ್ತ, ಜೈಭೀಮ್ ನಗರ, ವಿವೇಕಾನಂದ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿದ್ಯಾವರ್ಧಕ ಸಂಘ ತಲುಪುವುದು.ಮಧ್ಯಾಹ್ನ 12 ಗಂಟೆಗೆ ನಾಡೋಜ ಪಾಪು ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾ ಗುವುದು.
ಎರಡೂ ಜಯಂತಿ ಕಾರ್ಯಕ್ರಮಗಳಿಗೆ ವಿಶೇಷ ಉಪ ನ್ಯಾಸ ಏರ್ಪಡಿಸಲಾಗುವುದು.ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಐವರು ಹಾಗೂ ಪ್ರತಿಭಾತ ವಿದ್ಯಾರ್ಥಿಗಳನ್ನು ಗೌರವಿ ಸಲಾಗುವುದು.ಇದಕ್ಕಾಗಿ ಉಪಸಮಿತಿ ರಚಿಸಿ ಸಾಧಕರನ್ನು ಆಯ್ಕೆ ಮಾಡಲಾಗುವುದು.ಕಾರ್ಯಕ್ರಮದಲ್ಲಿ ಮಹಿಳೆ ಯರಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ.ಎನ್.ಆರ್. ಪುರುಷೋತ್ತಮ ಸಭೆ ನಿರ್ವಹಿಸಿದರು. ಡಿವೈಎಸ್‍ಪಿ ಚಂದ್ರಕಾಂತ ಪೂಜಾರಿ,ಆಹಾರ ಇಲಾಖೆ ಉಪನಿರ್ದೇಶಕ ಸುಧೀರ್ ಸಾವ್ಕಾರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ,ಸುಶೀಲಾ ಚಲವಾದಿ,ಮಹದೇವ ದೊಡ್ಡಮನಿ, ಅಶೋಕ ದೊಡ್ಡಮನಿ,ಸಂಗಮೇಶ ಮಾದರ,ಅಶೋಕ ಭಂಡಾರಿ,ಡಾ.ವಿಶ್ವನಾಥ ಚಿಂತಾಮಣಿ ಸೇರಿದಂತೆ ಜಿಲ್ಲಾ ಜಾಗೃತ ಸಮಿತಿ,ಸಫಾಯಿ ಕರ್ಮಚಾರಿಗಳ ಸಮಿತಿ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ದ್ದರು.