ಧಾರವಾಡ –
ಧಾರವಾಡ ಶಹರ ವಲಯದ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ದುರ್ಗಾಕಾಲನಿಯ ಶಾಲೆಯ ಮಕ್ಕಳಿಗೆ ಮೊಟ್ಟೆ,ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ವಿತರಿಸುವ ಯೋಜನೆಗೆ ಕಾರ್ಪೋರೇಟರ್ ದೀಪಾ ಸಂತೋಷ ನೀರಲಕಟ್ಟಿ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ಮಕ್ಕಳ ಅಪೌಷ್ಟಿಕತೆ ಅವರ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತದೆ.ಅದನ್ನು ಹೋಗಲಾಡಿಸಿ ಅವರಲ್ಲಿ ಪೌಷ್ಟಿಕತೆ ಹೆಚ್ಚಿಸುವ ದೃಷ್ಟಿ ಯಿಂದ ಪೂರಕ ಪೌಷ್ಠಿಕ ಆಹಾರ(ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ)ನೀಡುವ ಯೋಜನೆ ಜಾರಿಯಾಗಿದೆ ಅದರ ಸದುಪಯೋಗ ಎಲ್ಲಾ ಮಕ್ಕಳು ಪಡೆದು ಸದೃಡರಾ ಗಬೇಕು ಎಂದು ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ ಹೇಳಿದರು
ಧಾರವಾಡ ಶಹರದ ಹೆಬ್ಬಳ್ಳಿ ರಸ್ತೆಯಲ್ಲಿರುವ ದುರ್ಗಾ ಕಾಲನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಶಾಲಾ ಮಕ್ಕಳಿಗೆ ಪೂರಕ ಪೌಷ್ಠಿಕ ಆಹಾರದ (ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ)ವಿತರಣಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.7ನೇ ವಾರ್ಡ್ ನ ಕಾರ್ಪೊರೇಟರ್ ದೀಪಾ ಸಂತೋಷ ನೀರಲಕಟ್ಟಿ ಯವರು ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಮತ್ತು ಶೇಂಗಾ ಚಿಕ್ಕಿ ನೀಡು ವುದರ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಧಾರವಾಡ ಶಹರ ವಲಯದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಥ ಅಡಿವೇರ,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಲಿಕ್ ಅಹ್ಮದ್ ಬಿಸ್ತಿ, ಸದಸ್ಯರಾದ ಅಶೋಕ ಗರಗದ, ಅಮೀನಾ ಅತ್ತಾರ, ಪಾಲಕ ಪೋಷಕರಾದ ಕುಶಾಲ ಬೆಳವಡಿ,ಗದಿಗೆಪ್ಪ ಕಾಳೆ,ರಾಜು ಅಣ್ಣಿಗೇರಿ,ಫಾತೀಮಾ ಮುಲ್ಲಾ,ಶಾಲಾ ಮುಖ್ಯ ಗುರುಗಳಾದ ಎನ್.ಬಿ. ದ್ಯಾಪೂರ ಶಾಲಾ ಶಿಕ್ಷಕಿ ಮಂಜುಳಾ ಹರ್ಲಾಪೂರ,ಅಡುಗೆ ಸಹಾ ಯಕಿ ನಿರ್ಮಲಾ ಕಲಕಣಿ ,ಅಂಗನವಾಡಿ ಸಹಾಯಕಿ ಸುಜಾತಾ ,ಹಾಸ್ಯ ಕಲಾವಿದ ಖಾಜಾ ಸಿಬಾರಗಟ್ಟಿ ಮತ್ತು ಅವರ ಕಲಾವಿದ ಯುವಕರ ತಂಡ ಮತ್ತಿತರರು ಉಪಸ್ಥಿ ತರಿದ್ದರು.ಇದೇ ಸಂದರ್ಭದಲ್ಲಿ ಮುಕಳೆಪ್ಪ ಯುಟ್ಯೂಬ್ ಚಾನಲ್ ದಲ್ಲಿ ಹಾಸ್ಯದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಕಿರುಚಿತ್ರಗಳನ್ನು ಮಾಡಿ 10 ಸಾವಿರ ಸಬ್ ಸ್ಕ್ರೈಬರ್ ಹಾಗೂ ಲಕ್ಷಾಂತರ ಜನರ ನೋಡುಗರನ್ನು ತಲುಪಿದ ಸಂತೋಷಕ್ಕಾಗಿ ಶಾಲಾ ಮಕ್ಕಳಿಗೆ ಕಲಿಕಾ ಸಾಮ ಗ್ರಿಗಳನ್ನು ಖಾಜಾ ಸಿಬಾರಗಟ್ಟಿ ಕಲಾವಿದರ ತಂಡದ ವತಿ ಯಿಂದ ನೀಡಲಾಯಿತು.