ಧಾರವಾಡ –
ನಾಳೆಯಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆ ನಡೆಯಲಿದೆ ಹೌದು 2020-21ನೇ ಸಾಲಿನ 11-11-2020 ಕ್ಕೆ ಇದ್ದಂತೆ (ಹಿಂದಿನ ಅರ್ಜಿಗಳು) ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿ ಗಳ ವಿಭಾಗದೊಳಗಿನ ಕೋರಿಕೆ ವರ್ಗಾವಣೆಯನ್ನು ಅಂತಿಮ ಆದ್ಯತಾ ಪಟ್ಟಿಯಂತೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಡಿಸೆಂಬರ್ 16,2021 ರಂದು ಬೆಳಿಗ್ಗೆ 10 ಗಂಟೆಗೆ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿ ಆವರಣದಲ್ಲಿನ ಡಯಟ್ ಪ್ರಾರ್ಥನಾ ಮಂದಿರದಲ್ಲಿ ನಡೆಸಲಾಗುವುದು.
ವರ್ಗಾವಣೆಯ ಅಧಿಸೂಚನೆ ದಿನಾಂಕ ಕ್ಕೆ ಅಂದರೆ 11-11-2020 ಕ್ಕೆ ಇದ್ದಂತೆ (ಹಿಂದಿನ ಅರ್ಜಿಗಳು) ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಕನಿಷ್ಠ (3) ವರ್ಷ ಅವಧಿ ಪೂರೈಸಿದ ಹಾಗೂ ಗರಿಷ್ಠ (5) ವರ್ಷ ಪೂರೈಸದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ವರ್ಗಾವಣೆಯನ್ನು ಅಂತಿಮ ಆದ್ಯತಾ ಪಟ್ಟಿಯಂತೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ದಿನಾಂಕ 17-12-2021 ರಂದು ಬೆಳಿಗ್ಗೆ 10-00 ಗಂಟೆಗೆ ಅಪರ ಆಯುಕ್ತರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಈ ಕಚೇರಿ ಆವರಣದಲ್ಲಿನ ಡಯಟ್ ಪ್ರಾರ್ಥನಾ ಮಂದಿರದಲ್ಲಿ ನಡೆಸಲಾಗುವುದು.
ಇನ್ನೂ ಈ ಒಂದು ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗುವುದರ ಜೊತೆಗೆ ಕೋವಿಡ್-19 ಎಸ್.ಓ.ಪಿ ನಿಯಮಗಳನ್ನು ಕಡ್ಡಾಯ ವಾಗಿ ಪಾಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಆಯುಕ್ತರ ಕಚೇರಿಯ ನಿರ್ದೇಶಕರು ಹಾಗೂ ವರ್ಗಾವಣಾ ಪ್ರಾಧಿಕಾರಿಗಳಾಗಿರುವ ಮಮತಾ ನಾಯಕ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.