ಧಾರವಾಡ –
ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಧಾರವಾಡದ ವಿದ್ಯಾಗಿರಿ ಪೊಲೀಸರು ಸಾರ್ವಜನಿಕರಿಗೆ ಖಡಕ್ ಸಂದೇಶವೊಂ ದನ್ನು ನೀಡಿದ್ದಾರೆ.ಕೇವಲ ಪೊಲೀಸ್ ಕರ್ತವ್ಯ ನಮ್ಮದು ಎನ್ನದೇ ಅದರೊಂದಿಗೆ ಸಾಮಾಜಿಕ ಜವಾಬ್ದಾರಿ ಯ ಪ್ರಮುಖವಾದ ಸಂದೇಶವೊಂದನ್ನು ನೀಡಿದ್ದಾರೆ.
ಹೌದು ಸಧ್ಯ ದೀಪಾವಳಿ ಹಬ್ಬ ಬಂದ ಹಿನ್ನಲೆಯಲ್ಲಿ ಈ ಒಂದು ಸಮಯದಲ್ಲಿ ಸಾರ್ವಜನಿಕರು ಯಾರಾದರೂ ಇಸ್ಪೇಟು,ಜೂಜಾಟ ಸೇರಿದಂತೆ ಕಾನೂನು ಬಾಹಿರವಾದ ಆಟಗಳನ್ನು ಆಡಿದರೆ ಸೂಕ್ತವಾದ ಕ್ರಮವನ್ನು ಕೈಗೊಳ್ಳು ತ್ತೇವೆ ಹಾಗೇ ಯಾವುದೇ ಮುಲಾಜಿಲ್ಲದೇ ಪ್ರಕರಣವನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ಇದರೊಂದಿಗೆ ಪೊಲೀಸರು ಕೇವಲ ನಮ್ಮದು ಪೊಲೀಸ್ ಕರ್ತವ್ಯ ಅಲ್ಲದೇ ಇದರೊಂದಿಗೆ ಸಾರ್ವಜನಿಕರಿಗೆ ಜವಾಬ್ದಾರಿ ಸಂದೇಶವೊಂದನ್ನು ನೀಡಿ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ