ಹುಬ್ಬಳ್ಳಿ –
ವೃತ್ತಿಯಲ್ಲಿ ಪೊಲೀಸ್ ಆಗಿದ್ದರೂ ಇಲಾಖೆಗೆ ಹೆಮ್ಮೆಯ ಪೊಟೊ ಗ್ರಾಫರ್ ಆಗಿದ್ದಾರೆ ಮಹಾಲಿಂಗಪ್ಪ ಗುಡ್ಡಪ್ಪ ತಿಮ್ಮೇನಹಳ್ಳಿ.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಇಲಾಖೆಯ ಏನೇ ಯಾವುದೇ ಕಾರ್ಯಕ್ರಮಗಳಿದ್ದರೂ ಥಟ್ ಅಂತಾ ಹಾಜರಿರುತ್ತಾರೆ ಎಮ್ ಜಿ ತಿಮ್ಮೇನಹಳ್ಳಿ ಸಾಹೇಬ್ರು. 1992 ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಆರಂಭದಲ್ಲಿ 11 ವರುಷಗಳ ಕಾಲ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿನ ಸಿಎಆರ್ ವಿಭಾಗದಲ್ಲಿ ಜನರಲ್ ನೌಕರಿ ಮಾಡಿ ನಂತರ 2004 ರಿಂದ ಈವರೆಗೆ ಬರೊಬ್ಬರಿ 18 ವರುಷಗಳ ಕಾಲ ಇಲಾಖೆಯಲ್ಲಿ ಪೊಟೊಗ್ರಾಫರ್ ಆಗಿದ್ದಾರೆ.

ಇಲಾಖೆಯ ಏನೇ ಕಾರ್ಯಕ್ರಮವಿದ್ದರೂ ಕೂಡಾ ಥಟ್ ಅಂತಾ ಹಾಜರಾಗಿ ಎಲ್ಲಾ ಮಾಧ್ಯಮದ ಪೊಟೊ ಜರ್ನಲಿಸ್ಟ್ ಗಳಿಗೂ ಸರ್ ಕಾರ್ಯಕ್ರಮ ಆರಂಭವಾಗುತ್ತದೆ ಬನ್ನಿ ಎಂದು ಹೇಳುತ್ತಾ ಸದಾ ನಗು ನಗುತ್ತಾ ಸ್ನೇಹಜೀವಿಯಾಗಿರುವ ತಿಮ್ಮೇನಹಳ್ಳಿಯವರಿಗೆ ಇಂದು ಸೇವೆಯಲ್ಲಿ ಭಡ್ತಿ ಸಿಕ್ಕಿದೆ.

ಇಂದಿನಿಂದ ಎಎಸ್ಐ ಪ್ರಮೋಶನ್ ಪಡೆದುಕೊಂಡಿದ್ದಾರೆ. ಭಡ್ತಿ ಹಿನ್ನಲೆಯಲ್ಲಿ ಇಂದು ನವನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಮ್ ಜಿ ತಿಮ್ಮೇನಹಳ್ಳಿಯವರಿಗೆ ಪೊಲೀಸ್ ಆಯುಕ್ತರಾದ ಲಾಬುರಾಮ್ ಅವರು ಸ್ಟಾರ್ ನೀಡಿ ಭಡ್ತಿ ನೀಡಿದರು.

ಆಯುಕ್ತರ ಕಚೇರಿಯಲ್ಲಿ ತಿಮ್ಮೇನಹಳ್ಳಿ ಅವರಿಗೆ ಪ್ರಮೋಶನ್ ನೀಡಿ ಅಭಿನಂದಿಸಲಾಯಿತು.ಇನ್ನೂ ಭಡ್ತಿ ಪಡೆದುಕೊಂಡ ಮೇಲೆ ಇನ್ನೂ ಪೊಟೊಗ್ರಫಿ ಬಿಡ್ತಿರಿ ಎಂದು ಕೇಳಿದರೆ ಸರ್ ಖಂಡಿತಾ ನಾನು ಅದನ್ನು ಬಿಡೊದಿಲ್ಲ ಇನ್ನೂ ನಾಲ್ಕೂವರೆ ವರುಷ ಸೇವೆ ಇದೆ ಅದನ್ನು ಮುಗಿಸುತ್ತೇನೆ ಎಂದು ಖುಷಿಯಿಂದ ಹೇಳಿದರು.

ಇನ್ನೂ ಭಡ್ತಿ ಸಿಗುತ್ತಿದ್ದಂತೆ ಎಮ್ ಜಿ ತಿಮ್ಮೆನಹಳ್ಳಿ ಅವರಿಗೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಗಳು ಅಭಿನಂದನೆಗಳನ್ನು ಹೇಳಿ ಶುಭ ಹಾರೈಯಿಸಿದರು.

ಇನ್ನೂ ಹುಬ್ಬಳ್ಳಿಯ ಎಲ್ಲಾ ಪತ್ರಿಕೆಗಳ ಪೊಟೋ ಜರ್ನಲಿಸ್ಟ್ ಗಳಾದ ಡಿ ಹೇಮಂತ್ .ರವಿ ಹಳಿಜೋಳ,ಗುರು ಬಾಂಢಗೆ,ಕಿರಣ ಬಾಕಳೆ ,ಯಶವಂತ, ಆಜಾದ್ ವಾಮನ್ ಬಾಂಢಗೆ,ಮಂಜುನಾಥ ಜರತಾರಕರ .ಹರೀಶ್. ಗುರು ಹಬೀಬ, ಸಂತೋಷ ಇಳಿಗೇರ, ಸೇರಿದಂತೆ ಎಲ್ಲಾ ಪೊಟೊ ಜರ್ನಲಿಸ್ಟ್ ಮಿತ್ರರು ತಿಮ್ಮೇನಹಳ್ಳಿಯವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.