ಹುಬ್ಬಳ್ಳಿ –
ಅವರೆಲ್ಲ ಶಾಲೆಗೆ ಹೋಗುವ ವಿದ್ಯಾರ್ಥಿಗಳು. ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕು ಅಂದರೆ ಸಾಹಸವನ್ನೇ ಮಾಡಬೇಕಿದೆ.ಅಲ್ಲದೇ ಇಲ್ಲಿನ ವಿದ್ಯಾರ್ಥಿಗಳು ಸಚಿವರ ಮುಂದೆಯೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಹೌದು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ವಿದ್ಯಾರ್ಥಿ ಗಳು ಹೈಸ್ಕೂಲ್ ಗೆ ಹೋಗಬೇಕು ಅಂದರೇ ಇಲ್ಲಿಂದ ನಾಲ್ಕೈದು ಕಿಲೋಮೀಟರ್ ದೂರ ನಡೆದು ಬು.ಅರಳಿಕಟ್ಟಿ ಶಾಲೆಗೆ ಹೋಗಬೇಕಾಗಿದೆ. ಅಲ್ಲದೇ ಒಂದು ವೇಳೆ ಬಸ್ ಬಂದರೂ ಕೂಡ ಬಸ್ ಫುಲ್ ರಷ್ ಆಗುತ್ತೇ.

ಬಸ್ ಇಲ್ಲದೆ ದಿನನಿತ್ಯ ನಡೆದುಕೊಂಡೆ ಶಾಲೆಗೆ ಹೋಗಬೇಕಾಗಿದೆ.ಹುಡುಗರು ಹೇಗೋ ನಡೆದುಕೊಂಡು ಹೋಗುತ್ತಾರೆ.ಆದರೆ ಹುಡುಗಿಯರನ್ನು ದೂರದ ಊರಿಗೆ ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.

ಇನ್ನೂ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸೆಯಿದ್ದು ಸರಿಯಾದ ಸಾರಿಗೆ ಸೇವೆಯಿಲ್ಲದೇ ಒದ್ದಾಡುವಂ ತಾಗಿದೆ.ಈ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸಚಿವರು ಪರಿಹಾರದ ಭರವಸೆ ನೀಡಿದ್ದಾರೆ.ಆದರೆ ಇಲ್ಲಿನ ವಿದ್ಯಾರ್ಥಿಗಳ ಸಮಸ್ಯೆ ಕೇಳಿದರೇ ನಿಜಕ್ಕೂ ಇಲ್ಲಿನ ಪರಿಸ್ಥಿತಿ ವಾಸ್ತವ ಸ್ಥಿತಿಯ ಅರಿವಾಗುತ್ತದೆ.

ಮಳೆಗಾಲದಲ್ಲಿ, ಚಳಿಗಾಲದಲ್ಲಿ ಅಷ್ಟು ದೂರ ನಡೆದು ಕಲಿಯುವ ಅನಿವಾರ್ಯತೆ ಆದ್ರೂ ಏನಿದೇ ಎಂಬುವಂತ ಭಯದಿಂದ ಪಾಲಕರು ಮಕ್ಕಳನ್ನು ಜಾಸ್ತಿ ಕಲಿಯಲು ಕಳಿಸುತ್ತಿಲ್ಲ. ಕಲಿಯಬೇಕೆಂಬ ಹಂಬಲವಿರುವ ಮಕ್ಕಳು ಇಂದು ಸ್ವಯಂ ಪ್ರೇರಿತರಾಗಿ ಸಚಿವರ ಮುಂದೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನೂ ಕೂಡಲೇ ಬಸ್ ಸಂಚಾರ ಪ್ರಾರಂಭಿಸಿ.ಇದ್ದ ಊರಲ್ಲಿಯೇ ಹೈ ಸ್ಕೂಲ್ ನಿರ್ಮಾಣಕ್ಕೆ ಆರು ಎಕರೆ ಜಮೀನು ನೀಡುವ ಭರವಸೆಯನ್ನು ಕೂಡ ಸಚಿವರು ನೀಡಿದ್ದಾರೆ.

ಒಟ್ಟಿನಲ್ಲಿ ಇಲ್ಲಿನ ಮಕ್ಕಳ ಸಮಸ್ಯೆ ನೋಡಿದರೆ ನಿಜಕ್ಕೂ ಬೇಸರವಾಗುತ್ತದೇ.ಊರಿವ ಬಿಸಿಲಿನಲ್ಲಿ, ಸುರಿಯುವ ಮಳೆಯಲ್ಲಿ ನಡೆದು ಶಾಲೆಗೆ ಹೋಗಬೇಕಾಗಿದೆ.ಸಚಿವರೇ ಇಲ್ಲಿನ ಸಮಸ್ಯೆಗೆ ಕೂಡಲೇ ಪರಿಹಾರ ನೀಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಒಂದೊಳ್ಳೆಯ ಮಾರ್ಗವನ್ನು ಕಲ್ಪಿಸಬೇಕು ಎಂಬುವುದು ನಮ್ಮ ಆಶಯವಾಗಿದೆ.