ಹುಬ್ಬಳ್ಳಿ –
ಸಧ್ಯ ರಾಜ್ಯದಲ್ಲಿ ಮಹಾಮಾರಿ ಕರೋನ ಇನ್ನೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ.ಇದರ ನಡುವೆ ಶಿಕ್ಷಕರಿಗೆ ಶೈಕ್ಷಣಿಕ ವರ್ಷ ಆರಂಭ ಕುರಿತು ಶಾಲೆಗಳಿಗೆ ಹಾಜರಾಗಲು ಸರ್ಕಾರ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆ.ಇದರ ನಡುವೆ ರಾಜ್ಯದ ಹನ್ನೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿ ಸಲಾಗಿದೆ.ಒಂದು ಕಡೆ ಇನ್ನೂ ಕಡಿಮೆಯಾಗದ ಕರೋನ ಕಾಟ ಮತ್ತೊಂದು ಕಡೆಗೆ ಬಸ್ ಸಂಚಾರ ಇಲ್ಲ ಇದರ ನಡುವೆ ಶಾಲೆಗಳಿಗೆ ಶಿಕ್ಷಕರು ಅದರಲ್ಲೂ ಮಹಿಳಾ ಶಿಕ್ಷಕರು ಹೇಗೆ ಹೋಗಬೇಕು ಎಂಬ ಪ್ರಶ್ನೆ ನಾಡಿನ ಶಿಕ್ಷಕರಿಗೆ ಕಾಡುತ್ತಿದೆ.ಆದರೂ ಕೂಡಾ ಇಲಾಖೆ ಶಿಕ್ಷಣ ಸಚಿವರು ಇನ್ನೂ ಕೂಡಾ ಮೌನವಾ ಗಿದ್ದಾರೆ.ಇದೆಲ್ಲದರ ನಡುವೆ ಇತ್ತ ಶಿಕ್ಷಕರು ಗೊಂದಲ ದಲ್ಲಿ ಇದ್ದಾರೆ.

ಈಗಲೂ ಕೂಡಾ ಇಲಾಖೆ ಶಿಕ್ಷಣ ಸಚಿವರು ಯಾವುದೇ ರೀತಿಯ ಸ್ಪಷ್ಟವಾದ ಸಂದೇಶವನ್ನು ನೀಡಿಲ್ಲ ಹೀಗಾಗಿ ನಾಡಿನ ಗ್ರಾಮೀಣ ಶಿಕ್ಷಕರ ಧ್ವನಿ ಯಾಗಿ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸರ್ವ ಸದಸ್ಯರ ಪರವಾಗಿ ಮಾಜಿ ಮುಖ್ಯಮಂತ್ರಿಗಳು ಹಾಲಿ ಬೃಹತ್ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಅವರಿಗೆ ದೂರವಾಣಿ ಕರೆ ಮೂಲಕ ಶಾಲೆ ಆರಂಭ ಕುರಿತಂತೆ ನಾಡಿನ ಸಮಸ್ತ ಶಿಕ್ಷಕ ಬಳಗದ ವತಿಯಿಂದ ಮನವಿ ಮಾಡಿಕೊಂಡಿದ್ದು ಸಕಾ ರಾತ್ಮಕವಾಗಿ ಸ್ಪಂದಿಸಿ ತಕ್ಷಣ ಘನ ಸರ್ಕಾರದ ಗಮನ ಸೆಳೆಯುವುದಾಗಿ ತುಂಬು ಭರವಸೆ ನೀಡಿದ್ದಾರಂತೆ

ರಜೆಯನ್ನು ಮುಂದುವರೆಸಿ ಮನೆಯಿಂದಲೇ ಕೆಲಸ ಮಾಡುವ ಆದೇಶ ನೀಡುವ ಕುರಿತು ಮನವಿ ಮಾಡಿಕೊಂಡಿದ್ದು ರಜೆಯ ವಿಚಾರದಲ್ಲಿ ಮನವಿಗೆ ಸ್ಪಂದಿಸಿದ ಹಿನ್ನಲೆಯಲ್ಲಿ ಸಚಿವರಿಗೆ ಸಂಘದ ಸಮಸ್ತ ಪದಾಧಿಕಾರಿಗಳ ವತಿಯಿಂದ ವಂದನೆಗಳು ಅಭಿವಂದನೆಗಳನ್ನು ಹೇಳಲಾಯಿತು.

ಅನ್ನಪೂರ್ಣೇಶ್ವರಿ ಸುದ್ದಿ ಸಂತೆ ನ್ಯೂಸ್ ಡೆಸ್ಕ್ ಧಾರವಾಡ