ಹುಬ್ಬಳ್ಳಿ –
ತಲಾಷ್ ನಾಟಕದ ಟೀಸರ್ ಪೊಸ್ಟರ್ ಬಿಡುಗಡೆ ಮಾಡಿದ ಸಚಿವ ಸಂತೋಷ್ ಲಾಡ್ – ಸಂತೋಷ್ ಲಾಡ್ ಫೌಂಡೇಶನ್ ಅರ್ಪಿಸುವ ನಾಟಕ…..ಸಚಿವ ಸಂತೋಷ್ ಲಾಡ್ ಗೆ ಸಾಥ್ ನೀಡಿದ,ಅಲಿ ಗೋರವನಕೊಳ್ಳ,ಅಣ್ಣಪ್ಪ ಗೋಕಾಕ,ಮಲ್ಲಿಕಾರ್ಜುನ ಪಟ್ಟೇದ…..ಫೆಬ್ರುವರಿ 15 ರಂದು ನಾಟಕ ತಪ್ಪದೇ ಬನ್ನಿ ಹೌದು
ವಿಭಿನ್ನವಾದ ಕಥಾವಸ್ತುವನ್ನು ಹೊಂದಿರುವ ತಲಾಷ್ ನಾಟಕವೊಂದು ಫೆಬ್ರುವರಿ 15 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಬೆಲವಂತರ ಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ. ಹೌದು ಜೀವಿ ಕಲಾಬಳಗದ ಟೀಮ್ ನೊಂದಿಗೆ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಈ ಒಂದು ನಾಟಕವು ಅರ್ಪಿಸುತ್ತಿದೆ.
ಇನ್ನೂ ನಾಟಕದ ಟೀಸರ್ ಮತ್ತು ಪೊಸ್ಟರ್ ನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಹುಬ್ಬಳ್ಳಿ ಯಲ್ಲಿ ಬಿಡುಗಡೆ ಮಾಡಿದರು.ಹೌದು ಹುಬ್ಬಳ್ಳಿ ಯ ಖಾಸಗಿ ಹೊಟೇಲ್ ನಲ್ಲಿ ಸಚಿವ ಸಂತೋಷ ಲಾಡ್ ತಲಾಷ್ ನಾಟಕದ ಟೀಸರ್ ಮತ್ತು ಪೊಸ್ಟರ್ ನ್ನು ಬಿಡುಗಡೆ ಮಾಡಿದರು.
ಸಂತೋಷ್ ಲಾಡ್ ಫೌಂಡೇಷನ್ ಅರ್ಪಿಸು ತ್ತಿದ್ದು ತಲಾಷ್ ನಾಟಕದ ಪೊಸ್ಟರ್ ಮತ್ತು ಟೀಸರ್ ಅನ್ನು ಕಾರ್ಮಿಕ ಮತ್ತು ಜಿಲ್ಲಾ ಉಸ್ತು ವಾರಿ ಸಚಿವ ಸಂತೋಷ ಲಾಡ್ ಬಿಡುಗಡೆಗೊಳಿ ಸಿದರು. ನಗರದ ಖಾಸಗಿ ಹೊಟೇಲ್ ನಲ್ಲಿ ಟೀಸರ್ ಬಿಡುಗಡೆಗೊಳಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಸಂತೋಷ ಲಾಡ್ ನಾಟಕ ತುಂಬಾ ವಿಭಿನ್ನವಾದ ಕಥಾವಸ್ತು ಹೊಂದಿದ್ದು ತಲಾಷ್ ನಾಟಕದಲ್ಲಿ ಮಾದ್ಯಮದ ಸ್ನೇಹಿತರು ಸೇರಿ ಸಿನಿಮಾ,ಕಿರುತೆರೆ ಕಲಾವಿದರು ಅಭಿನಯಸಿದ್ದು ಫೆಬ್ರುವರಿ 15 ರಂದು ಕಲಘ ಟಗಿ ತಾಲ್ಲೂಕಿನ ಬೆಲವಂತರ ಗ್ರಾಮದಲ್ಲಿ ರಾತ್ರಿ 10.30ಕ್ಕೆ ನಾಟಕವನ್ನು ಪ್ರದರ್ಶಿಸಲಿದ್ದು
ನಾನೂ ನಾಟಕ ವೀಕ್ಷಿಸಲು ಆಗಮಿಸುತ್ತಿದ್ದೇನೆ ಎಲ್ಲರೂ ನಾಟಕ ನೋಡುವಂತೆ ಕರೆ ನೀಡಿದರು. ಸೋಮು ರೆಡ್ಡಿ ರಚಿಸಿರುವ ಗದಿಗೆಯ್ಯ ಹಿರೇಮಠ ನಿರ್ದೇಶಿಸಿರುವ ಜೀವ ಕಲಾ ಬಳಗ ಪ್ರಸ್ತುತಪ ಡಿಸುತ್ತಿರುವ ತಲಾಷ್ ನಾಟಕ ಮನುಷ್ಯನ ಲಾಲಸೆ,ಮೋಹ,ಮತ್ಸರಗಳ ಸುತ್ತ
ಹೆಣದ ಮೂಢನಂಬಿಕೆಗಳನ್ನ ವಿರೋಧಿಸುವ ಜ್ಯಾತಿ ವ್ಯವಸ್ಥೆಯನ್ನು ಧಿಕ್ಕರಿಸುವ ವಿಭಿನ್ನ ಕಥಾವಸ್ತು ಹೊಂದಿದ್ದು ಆಧುನಿಕ ಮತ್ತು ಸಂಪ್ರದಾಯಿಕ ರಂಗ ಪರಿಕಲ್ಪನೆಯಲ್ಲಿ ರೂಪಿಸ. ಲಾಗಿದೆ.ಗ್ರಾಮೀಣ ಭಾಗಕ್ಕೆ ಇದೊಂದು ವಿಭಿನ್ನ ವಾಗಿದ್ದು ನೋಡುಗರಿಗೆ ನವ್ಯ ಅನುಭವವನ್ನು ನೀಡಲಿದೆ.
ಬನ್ನಿ ನಾಟಕ ನೋಡಿ ಕಲಾವಿದರನ್ನು ಪ್ರೋತ್ಸಾ ಹಿಸಿ ಬೆಳೆಸಿ ಎಂದು ಸಚಿವರು ಕರೆ ನೀಡಿದರು. ಟೀಸರ್ ಪೊಸ್ಟರ್ ಬಿಡುಗಡೆಯ ಕಾರ್ಯಕ್ರ ಮದಲ್ಲಿ ಸಚಿವ ಸಂತೋಷ ಲಾಡ್ ರೊಂದಿಗೆ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾದ ಅಲಿ ಗೋರವನಕೊಳ್ಳ,ಅಣ್ಣಪ್ಪ ಗೋಕಾಕ,
ಪತ್ರಕರ್ತರಾದ ಮಲ್ಲಿಕಾರ್ಜುನ ಪಟ್ಟೇದ, ಪ್ರಕಾಶ್ ನೂಲ್ವಿ,ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..