This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

ಧಾರವಾಡ

ತುಪ್ಪರಿ ಹಳ್ಳದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಲಿಸಿ ಕೊಟ್ಟ ಮಾತಿನಂತೆ ನಡೆದುಕೊಂಡ ಸಚಿವ ಶಂಕರ ಪಾಟೀಲ ಮುನೇನಕೊಪ್ಪ – ಸಮಸ್ಯೆಗೆ ಮುಕ್ತಿ ನೀಡಿ ರೈತರ ಬದುಕಿಗೆ ಹಸನಾದ ಜನನಾಯಕ…..


ಹುಬ್ಬಳ್ಳಿ

ಅದು ಯಾವುದೇ ಸಾಗರಕ್ಕೂ ಕಡಿಮೆ ಇರದಂತ ವಿಹಂಗಮ ನೋಟಕ್ಕೆ ಸಾಕ್ಷಿಯಾಗಿರುವ ಹಳ್ಳ.ಈ ಹಳ್ಳ ಬಂತೂ ಅಂದರೇ ಮುಖದಲ್ಲಿ ನಗುವಿಗಿಂತ ಕಣ್ಣಂಚಿನಲ್ಲಿ ನೀರು ಬರುವುದಂತೂ ಖಂಡಿತ. ಹೀಗಿದ್ದ ಹಳ್ಳದ ಪರಿಸ್ಥಿತಿ ಈಗ ಬದಲಾಗಿದ್ದು ಈ ವರ್ಷ ಹಳ್ಳ ಬಂದರೇ ರೈತ ಸಮುದಾಯ ಫುಲ್ ಖುಷ್ ಆಗುವುದಂತೂ ಖಂಡಿತ ಅಷ್ಟಕ್ಕೂ ಏನಿದು ಹಳ್ಳದ ಕಂಪ್ಲಿಟ್ ಕಹಾನಿ ಇಲ್ಲಿದೆ

ಹೌದು ತುಪ್ಪರಿಹಳ್ಳದ ಸಮಸ್ಯೆಯಿಂದ ಜನ ಸಮುದಾಯ ನಿರಾಳ ಎಷ್ಟು ನೀರು ಬಂದರೂ ನಿರ್ಭಿತವಾಗಿ ನಡೆಯುತ್ತೇ ಜನಜೀವನ ಸೇತುವೆ ಸಂಪರ್ಕ ಕಡಿತ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತುಪ್ಪರಿಹಳ್ಳದ ಪರಿಸ್ಥಿತಿ ಅನುಭವಿಸಿದವರಿಗೆ ಗೊತ್ತು ಅದರ ನರಕಯಾತನೆ ಮಳೆ ಬಂದಾಗ ಜನಜೀವನ ರೋಷಿ ಹೋಗುತ್ತಿತ್ತು.ಆದರೆ ಈಗ ಇದರ ಚಿತ್ರಣವೇ ಬದಲಾಗಲಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧಾರವಾಡ ಜಿಲ್ಲೆಗೆ ಬಂದಾಗ 312 ಕೋಟಿ ಅನುದಾನದಲ್ಲಿ ತುಪ್ಪರಿಹಳ್ಳದ ಶಾಶ್ವತ ಪರಿಹಾ ರಕ್ಕೆ ಚಾಲನೆ ನೀಡಿದ್ದರು. ಚಾಲನೆ ನೀಡಿದ ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಿದೆ ಹೀಗಾಗಿ ಗ್ರಾಮಸ್ಥರು ಹಾಗೂ ರೈತ ಸಮುದಾಯ ನಿಟ್ಟು ಸಿರು ಬಿಟ್ಟಿದ್ದಾರೆ

ತುಪ್ಪರಿಹಳ್ಳದ ಶಾಶ್ವತ ಪರಿಹಾರದ ಕನಸು ನನಸಾಗಿದ್ದು ಮೊದಲ ಹಂತದಲ್ಲಿ 150 ಕೋಟಿ ವೆಚ್ಚದಲ್ಲಿ ಸಿಸಿ ತಡೆಗೋಡೆ, ಹೂಳು ತೆಗೆಯುವ ಕಾಮಗಾರಿ ಜೋರಾಗಿ ನಡೆದಿದೆ..

ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಅವರಾದಿ ಗ್ರಾಮದಿಂದ ಆರಂಭವಾಗುವ ತುಪ್ಪರಿಹಳ್ಳವೂ ನವಲಗುಂದ ಕ್ಷೇತ್ರದಲ್ಲಿ ಬರುತ್ತಿದ್ದ ಹಾಗೇ ಹಲವು ಸಮಸ್ಯೆಗಳನ್ನ ಉಂಟು ಮಾಡುತ್ತಿತ್ತು.ಇದೇ ಕಾರಣದಿಂದ ಹಲವರು ಪ್ರಾಣವನ್ನ ಕಳೆದುಕೊಂಡಿದ್ದಾರೆ.

ಜಾನುವಾರುಗಳು ನೀರು ಪಾಲಾಗಿವೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಯೂ ನಾಶವಾಗುತ್ತ ಬಂದಿದ್ದು, ಸ್ವತಃ ನವಲಗುಂದ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಶಂಕರ ಪಾಟೀಲ ಮುನೇನ ಕೊಪ್ಪ ಅವರು ಜನರ ಪ್ರಾಣ ಉಳಿಸಲು ಹಲವು ಬಾರಿ ಹಳ್ಳದ ದಡದಲ್ಲಿಯೇ ರಾತ್ರಿ ಕಳೆಯುವಂ ತಾಗಿತ್ತು

ಆದರೆ ಮೊನ್ನೆಯಷ್ಟೇ ಜಿಲ್ಲೆಗೆ ಆಗಮಿಸಿದ ಪ್ರಧಾನಿಯವರು ಶಾಶ್ವತ ಪರಿಹಾರ ಘೋಷಣೆ ಮಾಡಿದ ಬೆನ್ನಲ್ಲೇ ಈಗ ಕಾಮಗಾರಿ ಆರಂಭ ಗೊಂಡಿದ್ದು ರೈತರಲ್ಲಿ ಹಾಗೂ ನವಲಗುಂದ ತಾಲ್ಲೂಕಿನ ಜನರಲ್ಲಿ ಸಂತಸ ಮನೆ ಮಾಡಿದೆ.

ಇನ್ನೂ ತುಪ್ಪರಿಹಳ್ಳದ ಸಮಸ್ಯೆ ಅರಿತಿದ್ದ ಶಂಕರ ಪಾಟೀಲ ಮುನೇನಕೊಪ್ಪ, 2010 ರಲ್ಲಿ ಈ ಹಳ್ಳವನ್ನ ಜಲಸಂಪನ್ಮೂಲ ಇಲಾಖೆಗೆ ಸೇರು ವಂತೆ ನೋಡಿಕೊಂಡರು.ಇದೀಗ ತುಪ್ಪರಿಹಳ್ಳದ ಶಾಶ್ವತ ಪರಿಹಾರಕ್ಕೆ ಕಾಮಗಾರಿ ಆರಂಭಕ್ಕೆ ಸ್ವತಃ ಪ್ರಧಾನಿ ಚಾಲನೆ ನೀಡಿದ್ದಾರೆ

 

 

312 ಕೋಟಿ ವೆಚ್ಚದ ಮೊದಲ ಹಂತದಲ್ಲಿ 150 ಕೋಟಿ ಕಾಮಗಾರಿ ಆರಂಭವಾಗಿದೆ.ಹಾಗಿದ್ದರೇ ಕಾಮಗಾರಿಯ ಬಗ್ಗೆ ಜಲಸಂಪನ್ಮೂಲ ಇಲಾಖೆ ಯ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ

ಒಟ್ಟಿನಲ್ಲಿ ದಶಕಗಳ ಹೋರಾಟಕ್ಕೆ ಹಾಗೂ ಸ್ಥಳೀಯರ ಕಣ್ಣೀರಿಗೆ ಈಗ ಬೆಲೆ ಬಂದಂತಾಗಿದ್ದು, ಈಗ ತುಪ್ಪರಿಹಳ್ಳದ ಶಾಶ್ವತ ಪರಿಹಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಯಾವುದೇ ಅಡೆತಡೆಗಳಿದ್ದರೂ ಎಲ್ಲವನ್ನೂ ಮೆಟ್ಟಿ ನಿಂತು ಜನರು ಸಂತೋಷ ದಿಂದ ಜೀವನ ನಡೆಸಲು ಈ ನಿರ್ಧಾರ ಸಾಕ್ಷಿ ಯಾಗಬೇಕಿದೆ.

ಸುದ್ದಿ ಸಂತೆ ನ್ಯೂಸ್ ನವಲಗುಂದ…..


Google News Join The Telegram Join The WhatsApp

 

 

Suddi Sante Desk

Leave a Reply