ಹುಬ್ಬಳ್ಳಿ –
ಕಿಮ್ಸ್ ನ ವೈದ್ಯಕೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ತಂಗಿದ್ದ ಕಟ್ಟಡದ ಮೇಲೆ ಕಿಡಗೇಡಿಗಳು ತಡರಾತ್ರಿ ಕಲ್ಲು ತೂರಿದ ಘಟನೆ ನಡೆದಿದೆ.

ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಇನ್ಫೋಸಿಸ್ ಧರ್ಮಶಾಲಾ ಕಟ್ಟಡದಲ್ಲಿ ವೈದ್ಯ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಿಮ್ಸ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಆದ್ರೆ ತಡರಾತ್ರಿ ಏಕಾಏಕಿಯಾಗಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿ ಗ್ಲಾಸ್ ಒಡೆದು ಓರ್ವ ಮೆಡಿಕಲ್ ವಿದ್ಯಾರ್ಥಿಯ ಮೊಣಕಾಲಿಗೆ ಗಾಯವಾಗಿದೆ.

ಕಿಮ್ಸ್ 136 ವೈದ್ಯಕೀಯ ವಿದ್ಯಾರ್ಥಿಗಳ ತಾತ್ಕಾಲಿಕ ಈ ಕಟ್ಟಡದಲ್ಲಿದ್ದಾರೆ. ಎಂದಿನಂತೆ ಊಟ ಮಾಡಿ ಕಿಟಗಿ ಬಳಿ ಮಲಗಿದ್ದ ವಿದ್ಯಾರ್ಥಿಗಳ ಕಲ್ಲು, ಇಟ್ಟಿಗೆ ತೂರಿದ್ದು, ಕಿಟಕಿಯ ಗಾಜುಗಳು ಪುಡಿಪುಡಿಯಾಗಿ ಹಾಸಿಗೆಯಲ್ಲಿ ಬಿದ್ದಿದ್ದು, ವಿದ್ಯಾರ್ಥಿಗಳಿಗೆ ಆತಂಕದಲ್ಲಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕಿಮ್ಸ್ ಭದ್ರತಾ ಸಿಬ್ಬಂದಿಗಳು ಹಾಗೂ ಪಕ್ಕದಲ್ಲಿರುವ ಕಿಮ್ಸ್ ಕ್ವಾಟರ್ಸ್ ನಿವಾಸಿಗಳು ಆಗಮಿಸಿ ಗಾಯಾಳು ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಇನ್ನೂ ಇತ್ತ ವಿದ್ಯಾನಗರ ಪೊಲೀಸರು ಕೂಡಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.