ಧಾರವಾಡ –
ಧಾರವಾಡ ಜಿಲ್ಲೆಯ ಮಾಜಿ ಕರ್ನಾಟಕ ಕೇಸರಿ ಪೈಲ್ವಾನರಾದ ದಿ.ಬಸಣ್ಣ ಗಾಯಕವಾಡ ,
ದಿ. ಪೈ ಚಂದ್ರು ಕುರವಿನಕೂಪ್ಪ,ದಿ.ಸಯ್ಯದ್ ಮೊರಬ ಹಾಗೂ ದಿ. ಸಂಜು ಮಾನೆ ಅವರು ಕೊರೋನಾ 2 ನೇ ಅಲೆಯಲ್ಲಿ ಮಹಾಮಾರಿಗೆ ತುತ್ತಾಗಿದ್ದು ಇಂದು ಧಾರವಾಡದ ಜ್ಯೋತಿ ತಾಲೀಮಿ ನಲ್ಲಿ ಜಿಲ್ಲಾ ಕುಸ್ತಿ ಸಂಘದಿಂದ ಆಯೋಜಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಶಾಸಕ ಅಮೃತ್ ದೇಸಾಯಿ ಅವರು ಭಾಗವಹಿಸಿ ಪ್ರತಿಷ್ಠಿತ ಪೈಲ್ವಾನರಿಗೆ ನುಡಿನಮನ ಸಲ್ಲಿಸುವದರೊಂದಿಗೆ ಅವರ ಕುಟುಂಬದವರಿಗೆ ಸಾತ್ವನ ತಿಳಿಸಿದರು.
ನಂತರ ಮಾತನಾಡಿದ ಅವರು ಈ ಕೊರೋನಾ ಹೆಮ್ಮಾರಿಯಿಂದ 4 ಜನ ಕರ್ನಾಟಕ ಕೇಸರಿ ಕುಸ್ತಿ ಪೈಲ್ವಾನರನ್ನು ಕಳೆದುಕೊಂಡಿದ್ದು ಬಹಳ ದುಃಖಕರ ಸಂಗತಿಯಾಗಿದ್ದು ಈ ಹಿಂದೆ ಆಯೋಜಿಸಿದ ಕುಸ್ತಿ ಹಬ್ಬದಲ್ಲಿ ಅತಿ ಹೆಚ್ಚು ಉತ್ಸಾಹದಿಂದ ಓಡಾಡಿ ಕುಸ್ತಿಹಬ್ಬವನ್ನು ಯಶಸ್ವಿಗೊಳಿಸಿ ಧಾರವಾಡ ಜಿಲ್ಲೆಯ ಜನತೆಗೆ ಕುಸ್ತಿಯ ರಸದೌತಣ ಬಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಕಿರಿಯ ಪೈಲ್ವಾನರೆಲ್ಲ ಅವರ ಹಾಕಿಕೊಟ್ಟ ಮಾರ್ಗದಲ್ಲಿ ಶ್ರದ್ಧೆವಹಿಸಿ ನಡೆದುಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಪತಾಕೆಯನ್ನು ಹಾರಿಸಬೇಕೆಂದರು
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷರಾದ ನಿಂಗರಾಜ ಅಂಗಡಿ,ಜಿನ್ನಪ್ಪ ಕುಂದಗೋಳ, ನಾಗನಗೌಡ ಪಾಟೀಲ್ ,ಮಾಜಿ ಪಾಲಿಕೆ ಸದಸ್ಯರು ಶಿವಾನಂದ ಮುತ್ತಣ್ಣವರ್, ಶ್ರೀನಿವಾಸ್ ಶಾಸ್ತ್ರೀ , ರೆಹಮಾನ್ ಹೋಳಿ, ಧಾರವಾಡ ಜಿಲ್ಲೆಯ ಜ್ಯೋತಿ ತಾಲೀಮು ಹಾಗೂ ಮಾರುತಿ ಗರಡಿ ಮನೆಯ ಮಾಜಿ ಹಾಗೂ ಹಾಲಿ ಪೈಲ್ವಾನರು ಉಪಸ್ಥಿತರಿದ್ದರು.