ಧಾರವಾಡ –
ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಧಾರವಾಡ ದಲ್ಲೂ ಆಚರಣೆ ಮಾಡಲಾಯಿತು.ಧಾರವಾಡ ನಗರದ ಕೊಪ್ಪದಕೆರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ಅಮೃತ ದೇಸಾಯಿ ಹುಬ್ಬಳ್ಳಿ ಧಾರವಾಡ ಮಹಾ ನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಚಾಲನೆ ನೀಡಿದರು.
ಯೋಗಮಯಂ ಕೇಂದ್ರ ಮತ್ತು ಕ್ಷಮತಾ ಸೇವಾ ಸಂಸ್ಥೆ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ 8 ನೇ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾ ಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನಂತರ ವೇದಿಕೆಯ ಮೇಲೆ ಶಾಸಕ ಅಮೃತ ದೇಸಾಯಿ ಮೇಯರ್ ಈರೇಶ ಅಂಚಟ ಗೇರಿ ಸೇರಿದಂತೆ ಹಲವರು ಯೋಗವನ್ನು ಮಾಡುವ ಮೂಲಕ ಹಾಗೇ ಸಾಮೂಹಿಕ ಯೋಗ ಪ್ರದರ್ಶನವನ್ನು ಮಾಡಿದರು.
ಇದೇ ವೇಳೆ ಅಪಾರ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರೊಂದಿಗೆ ಯೋಗವನ್ನು ಮಾಡಿದರು.ಅರ್ಧ ಗಂಟೆಗೂ ಹೆಚ್ಚು ಕಾಲ ಯೋಗವನ್ನು ಮಾಡುವ ಮೂಲಕ ಶಾಸಕ ಅಮೃತ ದೇಸಾಯಿ ಮತ್ತು ಮೇಯರ್ ಅವರು ಯೋಗಾಸನ ಮಾಡಿ ಯೋಗದ ಮಹತ್ವ ತಿಳಿಸಿಕೊಟ್ಟರು.ಇನ್ನೂ ಈ ಒಂದು ಸಂಧರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ರಾದ ಶ್ರೀ ಈರೇಶ ಅಂಚಟಗೇರಿ ಡಾ ರಾಮನಗೌಡರ, ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಕಪಟಕರ,ಮಲ್ಲಿಕಾರ್ಜುನ ಬಾಳಿಕಾಯಿ ಸೇರಿದಂತೆ ಅನೇಕ ಗಣ್ಯರು ಸಾರ್ವಜನಿಕರು ಉಪಸ್ಥಿತರಿದ್ದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಯಲ್ಲಿ ಪಾಲ್ಗೊಂಡು ಅರ್ಥಪೂರ್ಣ ಆಚರಣೆಗೆ ಮೆರುಗು ನೀಡಿ ಸಾಕ್ಷಿಯಾದರು.