ಧಾರವಾಡ ದಲ್ಲೂ ಸಂಭ್ರಮದ ಕನ್ನಡ ರಾಜ್ಯೋತ್ಸವ – ಸಚಿವರಿಗೆ ಸಾಥ್ ನೀಡಿದ ಶಾಸಕ ಅಮೃತ ದೇಸಾಯಿ ಮತ್ತು ಹಲವರು…..

Suddi Sante Desk

ಧಾರವಾಡ –

66 ನೇ ಕರ್ನಾಟಕ ರಾಜ್ಯೋತ್ಸವ ವನ್ನು ವಿದ್ಯಾನಗರಿ ಸಾಹಿತಿಗಳ ತವರೂರು ಧಾರವಾಡ ದಲ್ಲೂ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.ನಗರದೆಲ್ಲೆಡೆ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ ಕಂಡು ಬಂದಿತು

ಹೌದು ಜಿಲ್ಲಾಡಳಿತ ದಿಂದ ನಗರದ ಆರ್ ಎನ್ ಶೆಟ್ಟಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು.ಜಿಲ್ಲಾಡಳಿತದಿಂದ ಆಯೋಜಿಸಿದ್ದ ಈ ಒಂದು ಸಮಾರಂಭ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನಾಡದೇವತೆಯ ಭಾವಚಿತ್ರ ಕ್ಕೆ ಪೂಜೆ ಸಲ್ಲಿಸಿ ನಂತರ ಧ್ವಜಾರೋಹಣ ನೆರವೇರಿಸಿದರು

ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಗೌರವ ವಂದನೆ ಯನ್ನು ಸ್ವೀಕರಿಸಿದರು

ಇದೇ ವೇಳೆ ಪೊಲೀಸ್ ತಂಡಗಳಿಂದ ಆಕರ್ಷಕವಾದ ಪಥಸಂಚಲನವು ಮೈದಾನದಲ್ಲಿ ನಡೆಯಿತು ಮತ್ತು ಸ್ಥಬ್ಧ ಚಿತ್ರಗಳ ಮೆರವಣಿಗೆಯೂ ಕಂಡು ಬಂದಿತು

ಈ ಒಂದು ಸಮಯದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಸೇರಿದಂತೆ ಅಧಿಕಾರಿಗಳು ಹಲವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.