ಶಾಸಕ ಅಮೃತ ದೇಸಾಯಿ ವನಹಳ್ಳಿ,ಹೆಬ್ಬಳ್ಳಿ ಗ್ರಾಮದಲ್ಲಿ ದಸರಾ ಆಚರಣೆ – ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಜನರೊಂದಿಗೆ ಹಬ್ಬ ಆಚರಣೆ…..

Suddi Sante Desk

ಧಾರವಾಡ –

ಸಾಮಾನ್ಯವಾಗಿ ದಸರಾ ಹಬ್ಬವನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಿದರೆ ಇತ್ತ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ದಸರಾ ಹಬ್ಬವನ್ನು ಕ್ಷೇತ್ರದ ಜನರೊಂದಿಗೆ ಆಚರಣೆ ಮಾಡಿದರು

ಹೌದು ವಿಜಯದಶಮಿಯ ಹಬ್ಬದ ಪ್ರಯುಕ್ತ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಮತ್ತು ವನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.ಗ್ರಾಮೀಣ ಕ್ಷೇತ್ರದ ಲ್ಲಿನ ಈ ಎರಡು ಗ್ರಾಮಗಳಿಗೆ ತೆರಳಿ ಬನ್ನಿ ಮರಕ್ಕೆ ಮೊದಲು ಪೂಜೆ ನೆರವೇರಿಸಿದರು.

ವನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಗ್ರಾಮದ ಜನರೊಂದಿಗೆ ದಸರಾ ಹಬ್ಬವನ್ನು ಆಚರಿಸಿದರು

ಇದರೊಂದಿಗೆ ಹಬ್ಬದಲ್ಲೂ ಕೂಡಾ ಶಾಸಕರು ಕ್ಷೇತ್ರದ ಜನತೆಯೊಂದಿಗೆ ದಸರಾ ಆಚರಣೆ ಮಾಡಿದ್ದು ಕಂಡು ಬಂದಿತು ಈ ಮೂಲಕ ತಾವೊಬ್ಬರು ಸಾಮಾನ್ಯರು ಎಂಬೊಂದನ್ನು ತೋರಿಸಿಕೊಟ್ಟರು

ಇದರೊಂದಿಗೆ ಹೆಬ್ಬಳ್ಳಿ ಗ್ರಾಮಕ್ಕೂ ತೆರಳಿ ಅಲ್ಲೂ ಕೂಡಾ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದ ಶಾಸಕರು ಜನರೊಂದಿಗೆ ಕುಳಿತುಕೊಂಡು ದಸರಾ ಹಬ್ಬವನ್ನು ಆಚರಣೆ ಮಾಡಿದರು ಈ ಸಂದರ್ಭದಲ್ಲಿ ವನಹಳ್ಳಿ ಹೆಬ್ಬಳ್ಳಿ ಗ್ರಾಮದ ಹಿರಿಯರು, ಯುವಕರು ಮತ್ತು ಸುತ್ತಮುತ್ತಲಿನ ಗ್ರಾಮದ ಜನರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.