ಧಾರವಾಡ –
ಧಾರವಾಡದ ಗ್ರಾಮೀಣ ಜನತೆಗೆ ಅನುಕೂಲ ಆಗು ವ ಉದ್ದೇಶದಿಂದ ಧಾರವಾಡದ ಗರಗ ರಸ್ತೆಯ ಲ್ಲಿರುವ ಗುತ್ತಲ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಆಸ್ಪತ್ರೆ ಆರಂಭಿಸಲಾಯಿತು.ಇದಕ್ಕೂ ಮುನ್ನ ಇಂದು ದೇಶಪಾಂಡೆ ಫೌಂಡೇಶನ್ ದೇಣಿಗೆ ನೀಡಿ ದಂತ ಆಕ್ಸಿಜನ ಕಾನ್ಸೆಂಟ್ರೆಟರ ಮಶೀನಗಳನ್ನ ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಶಾಸಕರು ಅಮೃತ ದೇಸಾಯಿಯವರು ನೇತೃತ್ವ ದಲ್ಲಿ ನೀಡಲಾಯಿತು

ಧಾರವಾಡದ ಗರಗ ರಸ್ತೆಯ ಕೋವಿಡ್ ಕೇರ್ ಆಗಿ ಮಾರ್ಪಟ್ಟ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಸಿ ಬಿ ಗುತ್ತಲ ಕೋವಿಡಕೇರಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಮೃತ ದೇಸಾಯಿ ಗ್ರಾಮಾಂತರ ಭಾಗದ ಜನತೆಗೆ ಅನುಕೂ ಲವಾಗುವ ದೃಷ್ಟಿಯಿಂದ ಈ ಕೋವಿಡ ಕೇರ ಸ್ಥಾಪ ನೆಯಾಗಿದ್ದು ವಿಶೇಷವಾಗಿ ದೇಶಪಾಂಡೆ ಫೌಂಡೇಶ ನ್ ದಾನಿಗಳಿಗೆ ಧಾರವಾಡ ಜನತೆ ಪರವಾಗಿ ತುಂಬಾ ಅಭಿನಂದನೆಗಳು ಎಂದರು

ಈ ಸದ್ಯದ 60 ಬೆಡ್ ವ್ಯವಸ್ಥೆಯನ್ನು 100 ಬೆಡಗಳಿ ಗೆ ಹೆಚ್ಚಿಸಲಾಗುವದು.ಗ್ರಾಮಾಂತರ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಹಾಗು ಶಾಸಕರ ನಿಧಿಯಲ್ಲಿ ಇನ್ನು ಹೆಚ್ಚಿನ ಕೋವಿಡ್ ಕೇರ್ ಹಾಗೂ ಆರೋಗ್ಯ ಸಲಕರಣೆಗಳನ್ನು ನೀಡಲಾಗುವದೆಂದರು

ಜನತೆ ಸರ್ಕಾರದ ಕೋವಿಡ ನಿಯಮಾವಳಿ ಪಾಲಿಸಿ ಎಲ್ಲರು ಕೂಡಿ ಈ ಮಹಾಮಾರಿ ವಿರುದ್ದ ಹೋರಾಡಿ ಗೆಲ್ಲೋಣ ಎಂದರು.ಈ ಒಂದು ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗೋಪಾಲಕೃಷ್ಣ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರಾದ ಈರೇಶ ಅಂಚಟಗೇರಿ ತಹಶೀಲ್ದಾರ ಸಂತೋಷ ಬಿರಾದಾರ ಪ್ರಾಂಶುಪಾಲರು ಶಶಿಧರ ಹೊಂಬಳ ಕ್ಷೇತ್ರ ಆರೋ ಗ್ಯಾಧಿಕಾರಿ ಯಶವಂತ ಮದಿನಕರ ಡಾ ಸತೀಶ ಇರಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.