ಧಾರವಾಡ –
ಧಾರವಾಡ KMF ಅಧ್ಯಕ್ಷರಾಗಿ ಶಂಕರ ಮುಗದ ಆಯ್ಕೆಯಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಬಸವರಾಜ ಅರಬಗೊಂಡ ಅವರನ್ನು ಅವಿಶ್ವಾಸ ಗೊಳಿಸಲಾಗಿತ್ತು. ನಂತರ ಚುನಾವಣೆಗೆ ಇಂದು ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಇಂದು ಚುನಾವಣೆಯ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಂಕರ ಮುಗದ ಅಷ್ಟೇ ನಾಮಪತ್ರವನ್ನು ಸಲ್ಲಿಸಿದ್ದರು
ಇವರನ್ನು ಹೊರತುಪಡಿಸಿ ಇನ್ನೂಳಿದಂತೆ ಯಾರು ಕೂಡಾ ನಾಮ ಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾ ಯಿತು
ನಾಲ್ಕು ಜಿಲ್ಲೆಗಳ ವ್ಯಾಪ್ತಿಯ 12 ಸದಸ್ಯರ ಬಲವನ್ನು ಹೊಂದಿದೆ ಧಾರವಾಡ ಕೆಎಮ್ ಎಫ್ ಘಟಕ
ಕೊನೆಗೂ ಶಾಸಕ ಅಮೃತ ದೇಸಾಯಿ ಅವರು ಈ ಒಂದು ಕೆಎಮ್ ಎಫ್ ನ ಅಧಿಕಾರ ಗದ್ದುಗೆಯನ್ನು ಶಾಸಕ ಅಮೃತ ದೇಸಾಯಿ ಬಣ ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ
ಇನ್ನೂ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಶಾಸಕ ಅಮೃತ ದೇಸಾಯಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಂಕರ ಮುಗದ ಅವರನ್ನು ಅಭಿನಂದಿಸಿ ಗೌರವಿಸಿದರು, ಇವರೊಂದಿಗೆ ತವನಪ್ಪ ಅಷ್ಟಗಿ,ತಿಪ್ಪಣ್ಣ ಮಜ್ಜಗಿ,ಬಿ ಎಸ್ ಕುಂದಗೋಳಮಠ,ಉಮೇಶ ದೂಶಿ,ಅಭಿಷೇಕ ಪಾಟೀಲ,ವಿರೇಶ ಬ್ಯಾಹಟ್ಟಿ, ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿ ಗೌರವಿಸಿದರು
ಇಂದಿನಿಂದ ಎರಡೂವರೆ ವರ್ಷ ಏಳು ತಿಂಗಳ ಅವಧಿಯಲ್ಲಿ ಅಧ್ಯಕ್ಷರಾಗಿ ಅಧಿಕಾರವನ್ನು ಮಾಡಲಿದ್ದಾರೆ.ಒಟ್ಟಾರೆ ಧಾರವಾಡದ ಕೆಎಮ್ ಎಫ್ ಅಧಿಕಾರ ವನ್ನು ಶಾಸಕ ಅಮೃತ ದೇಸಾಯಿ ತಮ್ಮ ತೆಕ್ಕೆಗೆ ತಗೆದುಕೊಂಡಿದ್ದಾರೆ