ಧಾರವಾಡದ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ ಅನುದಾನದಡಿಯಲ್ಲಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನ ಮಠಕ್ಕೆ ೫ ಲಕ್ಷ ರೂಪಾಯಿಗಳ ಅನುದಾನದ ಚೆಕ್ ನ್ನು ಮಠದ ಧರ್ಮಾದಿಕಾರಿಗಳಾದ ಪರಮಪೂಜ್ಯ ಸಂಗಮೇಶ್ ದೇವರಿಗೆ ಹಸ್ತಾಂತರಿಸಲಾಯಿತು.

ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಚೆಕ್ ನ್ನು ವಿತರಣೆ ಮಾಡಿದರು.ಈ ಒಂದು ಸಂಧರ್ಭದಲ್ಲಿ ತಹಶೀಲ್ದಾರ್ ಸಂತೋಷ ಬಿರಾದಾರ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗಂಗವ್ವ ನಿರಂಜನ,ಉಪಾಧ್ಯಕ್ಷ ಆತ್ಮಾನಂದ ಹುಂಬೇರಿ,ಚೆನ್ನವೀರಗೌಡ ಪಾಟೀಲ,ಶಂಕರ ಕೋಮಾರ ದೇಸಾಯಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು
