ವಾರ್ಡ್ 3 ರ BJP ಅಭ್ಯರ್ಥಿ ಪರ ಶಾಸಕ ಅಮೃತ ದೇಸಾಯಿ ಪ್ರಚಾರ ಹೋದಲೆಲ್ಲ ಅಭೂತಪೂರ್ವ ಬೆಂಬಲ…..

Suddi Sante Desk

ಧಾರವಾಡ –

ಧಾರವಾಡದ ವಾರ್ಡ್ 3 ರ ಬಿಜೆಪಿ ಅಭ್ಯರ್ಥಿ ವಿರೇಶ ಅಂಚಟಗೇರಿ ಅಬ್ಬರದ ಪ್ರಚಾರ ಮಾಡುತ್ತಿ ದ್ದಾರೆ.ವಾರ್ಡ್ ನಲ್ಲಿ ಎರಡನೇಯ ಬಾರಿಗೆ ಅಖಾಡ ಕ್ಕಿಳಿದ ಇವರ ಪರವಾಗಿ ಹೋದಲ್ಲೆಲ್ಲ ಅಭೂತ ಪೂರ್ವ ಜನ ಬೆಂಬಲ ಕಂಡು ಬರುತ್ತಿದೆ

ಇನ್ನೂ ಇವರ ಪರವಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಪ್ರಚಾರ ಮಾಡಿದರು ವಾರ್ಡ್ ನ ಹಲವೆಡೆ ಪಾದಯಾತ್ರೆ ಮೂಲಕ ಹಾಗೇ ಅಲ್ಲಲ್ಲಿ ಸಭೆ ಮಾಡಿ ಮತಯಾ ಚನೆ ಮಾಡಿ ಅಭ್ಯರ್ಥಿ ಗೆಲುವಿಗೆ ಮತದಾರರಲ್ಲಿ ಕರೆ ನೀಡಿದರು

ಇದರೊಂದಿಗೆ ಇವರ ಪರವಾಗಿ ಧಾರವಾಡದ ಕಮಲಾಪುರ ಭಾಗದ ರೈತರು ಗುರುಹಿರಿಯರು ಯುವಕರೊಂದಿಗೆ ನಾರಾಯಣ ಪುರದ ಹನುಮಂತ ದೇವಸ್ಥಾನದಲ್ಲಿ ಸ್ಥಳಿಯರೊಂದಿಗೆ ಅಭಿವೃದ್ಧಿ ಹಾಗು ಇನ್ನಿತರ ವಿಷಯಗಳನ್ನು ಚರ್ಚಿಸಿ ಸಮಾಲೋಚಿಸಲಾಯಿತು

ಈ ಸಂದರ್ಭದಲ್ಲಿ ರಮೇಶ ತಳಗೇರಿ ಮಹಾದೇವ ಬಾಬರ ವಿನಯ ಬಾಬರ ನಿಂಗಪ್ಪ ಸಪ್ಪೂರಿ ಅಶೋಕ‌ ಚವಾಣ, ಭೀಮಸಿ ತಳಗೇರಿ, ಈರಪ್ಪ ಈಳಗೇರ, ಕಮಾಟೆ ಕುಟುಂಬ, ನೀಲಕಂಠ ಸಜ್ಜನ ಸುಭಾಷ ಕಂಬಳಿ ಹಾಗು ಗುರುಹಿರಿಯರು ಯುವಕರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.