ಧಾರವಾಡ –
ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಧಾರವಾಡದಲ್ಲಿ ಅಧಿಕಾರಿಗಳೊಂದಿಗೆ ಸಭೆ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಮಾಡಿದ ಅವರು ತಾಲೂಕಿನಾದ್ಯಂತ ಮಳೆ ಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟ ಗಾರಿಕೆ ಬೆಳೆ ರಸ್ತೆ ಹಾಗೂ ಕೆರೆ, ಸೇತುವೆ ಕುರಿತು ಸಮೀಕ್ಷೆ ನಡೆಸುವಂತೆ ಶಾಸಕ ಅಮೃತ ದೇಸಾಯಿ ಸೂಚನೆ ನೀಡಿದರು.

ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಳೆ ಹಾನಿಯ ಮಾಹಿತಿ ಪಡೆದರು.ಇದೇ ವೇಳೆ ಹಾನಿ ಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು, ರಸ್ತೆ ,ಸೇತುವೆಗಳು,ಕೆರೆ ಕಟ್ಟೆಗಳು,ಶಾಲಾ ಕಟ್ಟಡ ಗಳು ಹಾಗೂ ಮನೆಗಳ ಕುರಿತು ಸರಿಯಾದ ಸಮೀಕ್ಷೆ ನಡೆಸಿ ಸರಿಯಾದ ಪಟ್ಟಿ ತಯಾರಿಸಬೇಕು. ಅವುಗ ಳಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿ ಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಹೇಳಿದರು.ಈ ಸಂಧರ್ಭದಲ್ಲಿ ತಾಲೂಕಿನ ತಹಶೀ ಲ್ದಾರ ಸಂತೋಷ ಬಿರಾದಾರ,ತಾಲೂಕಾ ಪಂಚಾ ಯತ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ವಾಹಕರು ಕೃಷಿ ಇಲಾಖೆ,ಸಹಾಯಕ ನಿರ್ವಾಹಕರು ಪಶುಸಂಗೋಪನಾ ಇಲಾಖೆ, ಸಹಾ ಯಕ ನಿರ್ವಾಹಕರು ತೋಟಗಾರಿಕೆ ಇಲಾಖೆ, ಪಂಚಾಯತ ರಾಜ್ಯ ಇಂಜಿನಿಯರಿಂಗ ವಿಭಾಗದ ಅಧಿಕಾರಿಗಳು ಹಾಗೂ ಕ್ಷೇತದ ಶಿಕ್ಷಣ ಅಧಿಕಾರಿಗಳು ಸೇರಿದಂತೆ ಹಲವರು ಈ ಒಂದು ಸಂದರ್ಭದಲ್ಲಿ ಉಪಸ್ಥಿತರಿದ್ದರು.
