ಧಾರವಾಡ –
ಸಾಲದ ಬಾಧೆಯಿಂದಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಧಾರವಾಡದ ಕಮಲಾಪುರದ ರೈತನಾದ ಮಹಾರುದ್ರಪ್ಪ ಬಸಪ್ಪ ಕೋಟಿ ಅವರ ಮನೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕೆಲ ಕಾಲ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಇದೇ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ಮತ್ತು ದಾಖಲೆಗಳನ್ನು ಒದಗಿಸಲಾಯಿತು.

ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರು ಈರೇಶ ಅಂಚಟಗೇರಿ ,ಬಸವಣ್ಣೆಪ್ಪ ಅಣ್ಣಿಗೇರಿ , ಬಸವರಾಜ ಬಾಳಗಿ ಎಪಿಎಂಸಿ ಸದಸ್ಯರು ,ಮಡಿವಾಳಿ ಇಸ್ರಣ್ಣವರ , ನಿಂಗಪ್ಪ ಸಪ್ಪುರಿ , ಈರಯ್ಯ ರಾಚಯ್ಯನವರ, ಚನ್ನಬಸಪ್ಪ ಹೊಟ್ಟಿ ,ಅಣ್ಣಪ್ಪ ಹೆಬ್ಬಳ್ಳಿ , ಮಲ್ಲೇಶಪ್ಪ ಅನಾಡ ಹಾಗು ರೈತ ಬಾಂಧವರು ಉಪಸ್ಥಿತರಿದ್ದರು.