ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಅಮೃತ ದೇಸಾಯಿ ಭೇಟಿ ಪರಿಶೀಲನೆ – ಶಾಸಕರಿಗೆ ಸಾಥ್ ನೀಡಿದ ಅಧಿಕಾರಿಗಳು…..

Suddi Sante Desk

ಧಾರವಾಡ –

ಧಾರವಾಡ ತಾಲ್ಲೂಕಿನಲ್ಲಿ ಸಾಕಸ್ಟು ಪ್ರಮಾಣದಲ್ಲಿ ನಿನ್ನೆ ಮಳೆಯಾಗಿದ್ದು ಹೀಗಾಗಿ ಮಳೆಯಿಂದ ಹಾನಿ ಗೊಳಗಾದ ತಾಲ್ಲೂಕಿನ ಹಲವು ಗ್ರಾಮಗಳಿಗೆ ಶಾಸಕ ಅಮೃತ ದೇಸಾಯಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ತಾಲ್ಲೂಕಿನ ಅಮ್ಮಿನಬಾವಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಮಳೆಯಿಂದ ಹಾನಿಗೊಳಗಾಗ ಪ್ರದೇಶ ಗಳಿಗೆ ತೆರಳಿ ವೀಕ್ಣಣೆ ಮಾಡಿದರು. ಗ್ರಾಮದಲ್ಲಿನ ಕೆಲ ಸ್ಥಳಗಳಲ್ಲಿ ಹಾಗೇ ಜಮೀನಿಗೆ ತೆರಳಿದ ಶಾಸಕ ರು ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಸಂಭವಿ ಸಿದ ಹಾನಿಯನ್ನು ವೀಕ್ಷಣೆ ಮಾಡಿ ರೈತರಿಂದ ಮಾಹಿ ತಿಯನ್ನ ಪಡೆದುಕೊಂಡರು.

ಇದೇ ವೇಳೆ ಅಧಿಕಾರಿಗಳಿಗೆ ಹಾನಿಯಾದ ಕುರಿತಂತೆ ಶಾಸಕರು ಸ್ಥಳದಲ್ಲಿಯೇ ಸಂಪೂರ್ಣವಾದ ಮಾಹಿ ತಿಯನ್ನು ನೀಡಿ ಸೂಕ್ತವಾದ ಕ್ರಮವನ್ನು ಕೈಗೊಂಡು ಪರಿಹಾರಕ್ಕೆ ಸೂಚಿಸಿದರು.

ಶಾಸಕರೊಂದಿಗೆ ತಾಲ್ಲೂಕಿನ ತಹಶೀಲ್ದಾರ್ ಸಂತೋಷ ಬಿರಾದರ ಸೇರಿದಂತೆ ಹಲವು ಅಧಿಕಾರಿ ಗಳು ಉಪಸ್ಥಿತರಿದ್ದರು.ಇದರೊಂದಿಗೆ ಶಾಸಕರು ಬೆಳ್ಳಂ ಬೆಳಿಗ್ಗೆ ತಾಲ್ಕೂಕಿನ ಕ್ಷೇತ್ರಗಳಲ್ಲಿನ ಗ್ರಾಮಗಳ ಲ್ಲಿನ ಮಳೆಯಿಂದ ಹಾನಿಯಾದ ಸ್ಥಳಗಳಿಗೆ ತೆರಳಿ ಸಮಸ್ಯೆ ಆಲಿಸಿ ಪರಸ್ಥಿತಿಯನ್ನು ಅವಲೋಕನ ಮಾಡಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.