ಧಾರವಾಡ –
ಧಾರವಾಡ ತಾಲ್ಲೂಕಿನ ವಿವಿದೆಡೆ ತೆರೆಯಲಾಗಿರುವ ಕೋವಿಡ್ ಕೇರ್ ಕೇಂದ್ರಗಳಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಭೇಟಿ ಮಾಡಿ ಪರಿಶೀಲನೆ ಮಾಡಿದರು.
ಮೊದಲು ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಮೊರಾ ರ್ಜಿ ವಸತಿ ಶಾಲೆಯಲ್ಲಿ ತೆರೆಯಲಾಗಿರುವ ಕೋವಿ ಡ್ ಕೇಂದ್ರಕ್ಕೆ ಭೇಟಿ ಮಾಡಿ ಅಲ್ಲಿನ ವ್ಯವಸ್ಥೆಯನ್ನು ಮತ್ತು ಇತರೆ ಸೌಲಭ್ಯಗಳನ್ನು ಪರಿಶೀಲನೆ ಮಾಡಿ ದರು.
ಅಧಿಕಾರಿಗಳೊಂದಿಗೆ ಕೇಂದ್ರಕ್ಕೆ ತೆರಳಿದ ಶಾಸಕರು ಕೆಲ ಸಮಯ ಆಶಾ ಕಾರ್ಯಕರ್ತೆಯರು ಮತ್ತು ಸ್ಥಳೀಯ ಮುಖಂಡರು ಸಾರ್ವಜನಿಕರೊಂದಿಗೆ ಮಾತುಕತೆ ಮಾಡಿದರು. ಸಹಕಾರ ಕೊಡಿ ನಾವು ನೀವು ಸೇರಿಕೊಂಡು ಇದನ್ನು ಗೆಲ್ಲೊನೊ ಎಂದರು.
ಇನ್ನೂ ಇದೇ ವೇಳೆ ಕೇಂದ್ರದ ಒಳಗಡೆ ತೆರಳಿ ಅಲ್ಲಿ ರುವ ರೋಗಿಗಳೊಂದಿಗೆ ಮಾತುಕತೆ ಏನಾದರೂ ಬೇಕಾದರೆ ಹೇಳಿ ವ್ಯವಸ್ಥೆ ಮಾಡಿಸುತ್ತೇವೆ ದಯ ಮಾಡಿ ಇಲ್ಲೇ ಇರಿ ಎಂದರು. ಜೊತೆಗೆ ಕೇಂದ್ರದಲ್ಲಿನ ವ್ಯವಸ್ಥೆಗಳ ಕುರಿತಂತೆ ಹಾಗೇ ಬೇಡಿಕೆಗಳ ಕುರಿತಂತೆ ಕೇಳಿದರು.
ಇನ್ನೂ ಇದೇ ವೇಳೆ ಪೊಲೀಸ್ ಸಿಬ್ಬಂದ್ದಿ .ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳಿಗೆ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡಿ ಯಾವುದೇ ಕಾರಣಕ್ಕೂ ಈ ಒಂದು ವಿಚಾರದಲ್ಲಿ ಕರ್ತವ್ಯ ನಿರ್ಲಕ್ಷ್ಯ ಬೇಡ ಎಂದರು.
ಇನ್ನೂ ನಂತರ ಅಲ್ಲಿಂದ ನೇರವಾಗಿ ಹಾರೋ ಬೆಳ ವಡಿ ಗ್ರಾಮದಲ್ಲಿ ತೆರೆಯಲಾಗಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದರು.ಇಲ್ಲಿ ಕೂಡಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಅಮೃತ ದೇಸಾಯಿ ಅವರು ಕೇಂದ್ರದಲ್ಲಿನ ವ್ಯವಸ್ಥೆ ಸೌಲಭ್ಯಗಳ ಕುರಿತಂತೆ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದುಕೊಂಡ ರು.
ಇದೇ ವೇಳೆ ಕೇಂದ್ರದಲ್ಲಿನ ಕೆಲ ವ್ಯವಸ್ಥೆಗಳ ಕುರಿ ತಂತೆ ದೂರು ಬಂದ ಹಿನ್ನಲೆಯಲ್ಲಿ ವ್ಯವಸ್ಥೆ ಮಾಡು ವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಿದರು. ತಾಲ್ಲೂಕಿನ ಎರಡು ಕೋವಿಡ್ ಕೇಂದ್ರಗಳಿಗೆ ಶಾಸಕ ಅಮೃತ ದೇಸಾಯಿ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ತಹಶೀಲ್ದಾರ ಸಂತೋಷ ಬಿರಾದರ,ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ತನುಜಾ,ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ರಾಘವೇಂದ್ರ, ಬಸವರಾಜ ತಂಬಾಕದ,ಮಂಜುನಾಥ ವಾಸಂಬಿ
ಗ್ರಾಮ ಪಂಚಾಯತ ಸದಸ್ಯರಾದ ಸುರೇಶ ಬನ್ನಿಗಿಡ ದ,ವಿಠ್ಠಲ ಬೋವಿ.ನಿಂಗು ಮೊರಬದ,ಬಸು ಹೆಬ್ಬಾ ಳ,ಶಂಕರ ಗಾರಗಿ,ಶಿಕ್ಷಕರಾದ ಎಲ್ ಐ ಲಕ್ಕಮ್ಮನ ವರ.ಮಲ್ಲಿಕಾರ್ಜುನ ಉಪ್ಪಿನ,ಆರೋಗ್ಯ ಇಲಾಖೆ ಯ ಅಧಿಕಾರಿಗಳು ಪಿಡಿಓ ಬಿ ಡಿ ಚೌರಡ್ಡಿ, ಸಂತೋಷ ಪಾಟೀಲ,ಶಿವಶಂಕರ ಬಿಡಿ, ಸೇರಿದಂತೆ ಹೆಬ್ಬಳ್ಳಿ ಮತ್ತು ಹಾರೋ ಬೆಳಗವಡಿ ಗ್ರಾಮಗಳ ಗ್ರಾಮಸ್ಥರು ಹಲವರು ಉಪಸ್ಥಿತರಿದ್ದರು.