ಧಾರವಾಡ –
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಬಸಪ್ಪ ಗಂಗೋಜಿ ಎಂಬುವರ ಹೊಲದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅವರ 2 ಎತ್ತು ಮತ್ತು 1 ಆಕಳು ಮೃತಪಟ್ಟ ಹಿನ್ನೆಲೆ ಯಲ್ಲಿ ಶಾಸಕ ಅಮೃತ ದೇಸಾಯಿ ಅವರು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.ವೈಯಕ್ತಿಕವಾಗಿ 20 ಸಾವಿರ ರೂಪಾಯಿ ನೀಡಿ ಸಹಾಯಧನವಾಗಿ ಪರಿಹಾರದೊಂದಿಗೆ ರೈತ ಬಸಪ್ಪ ಅವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲೂಕು ಅಧಿಕಾರಿ ಗಳಿಗೆ ಸರಕಾರದಿಂದ ಸಿಗುವ ವಿವಿಧ ಸೌಲಭ್ಯ ಮತ್ತು ಸವಲತ್ತುಗಳನ್ನು ರೈತರಿಗೆ ಕಲ್ಪಿಸುವಂತೆ ಸೂಚನೆ ನೀಡಿದರು.
ಈ ಸಂಧರ್ಭದಲ್ಲಿ ತಹಶೀಲ್ದಾರ ಸಂತೋಷ ಹಿರೇಮಠ, ಕನಕೂರು ಗ್ರಾಮ ಪಂಚಾಯತ ಉಪಾಧ್ಯಕ್ಷ ಚನ್ನಬಸಪ್ಪ ಕವಳಿ, ಗ್ರಾಮ ಪಂಚಾಯತ ಸದಸ್ಯರಾದ ಮುತ್ತು ಇಂಚಲ, ಅಶೋಕ ನಾವಳ್ಳಿ ಹಾಗೂ ಗ್ರಾಮಸ್ಥರಾದ ತಿಪ್ಪಣ್ಣ ತಿರ್ಲಾ ಪೂರ,ಮಹಾಂತೇಶ ತಿರ್ಲಾಪುರ,ವಿಶ್ವನಾಥ ಕವಳಿ, ಹುವಾಪ್ಪ ಯಮೋಜಿ,ಸಂತೋಷ ಉಪ್ಪಾರ,ಶೇಕಣ್ಣ ಜಪಾಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.