ಧಾರವಾಡ –
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಲನೆ ನೀಡಿದರು ಹೌದು ಕ್ಷೇತ್ರದಲ್ಲಿನ ಗೋವನಕೊಪ್ಪ,ಕವಲಗೇರಿ,ದಂಡಿಕೊಪ್ಪ,ಗೊಂಗಡಿಕೊಪ್ಪ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಧಾರವಾಡ 2021-22 ಸಾಲಿನ 5054 ರಡಿ ಅಂದಾಜು 65 ಲಕ್ಷ ರೂಪಾಯಿ ಅನುದಾನದಲ್ಲಿ ಧಾರವಾಡ ತಾಲೂಕಿನ ಗೋವನಕೊಪ್ಪ ದಂಡಿಕೊಪ್ಪದಿಂದ ದಂಡಿನದಾರಿ ಮಾರಡ ಗಿವರೆಗೆ ರಸ್ತೆ ನಿರ್ಮಾಣ ಕಾಮಗಾರಿ.ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಧಾರವಾಡ 2021-22 ಸಾಲಿನ 5054 ರಡಿ ಅಂದಾಜು 51 ಲಕ್ಷ ಅನುದಾನದಲ್ಲಿ ಗೋವನ ಕೊಪ್ಪ ಮತ್ತು ಕವಲಗೇರಿ ರಸ್ತೆ ಸುಧಾರಣಾ ಕಾಮಗಾರಿ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಧಾರ ವಾಡ 2021-22 ಸಾಲಿನ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಶಿವಮೊಗ್ಗ ಬಂಡವಾಳ ವೆಚ್ಚ ಯೋಜನೆಯಡಿ ಅಂದಾಜು 16 ಲಕ್ಷಗಳ ಅನುದಾನದಲ್ಲಿ ದಂಡಿಕೊಪ್ಪ ಗ್ರಾಮದಿಂದ ಕವಲಗೇರಿ ಡಾಂಬರ್ ರಸ್ತೆಯವರೆಗೆ ರಸ್ತೆ ಸುಧಾರಣಾ ಕಾಮಗಾರಿ ಗೆ ಚಾಲನೆ ನೀಡಿದರು
ಲೋಕೋಪಯೋಗಿ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರ್ ಐ ಡಿ ಎಫ್ 25 ರ ಅನುದಾನದಡಿ ಧಾರವಾಡ ತಾಲೂಕಿನ ದಂಡಿಕೊಪ್ಪ ಗ್ರಾಮದ ಅಂಗನ ವಾಡಿ ನಿರ್ಮಾಣ ಭೂಮಿಪೂಜೆ.ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಂದಾಜು 94 ಲಕ್ಷ ಅನುದಾನದಲ್ಲಿ ಧಾರವಾಡ ತಾಲೂಕಿನ ಗೋವನ ಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು ಮತ್ತು ಮನೆಗಳಿಗೆ ನಳಗಳ ಜೋಡಣೆ ಕಲ್ಪಿಸುವ ಯೋಜನೆ ಗೆ ಚಾಲನೆ ನೀಡಿದರು.ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಂದಾಜು 28 ಲಕ್ಷ ಅನುದಾನದಲ್ಲಿ ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು ಮತ್ತು ಮನೆಗಳಿಗೆ ನಳಗಳ ಜೋಡಣೆ ಕಲ್ಪಿಸುವುದು.ಈ ಸಂಧರ್ಭದಲ್ಲಿ ಗುರುನಾಥ ಗೌಡ ಗೌಡರ,ಅಶೋಕ ಕನಕಿನಕೊಪ್ಪ, ಶಿವು ಬೇಳಾರದ,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.