ಧಾರವಾಡ –
ಗ್ರಾಮಗಳ ಅಭಿವೃದ್ಧಿ ನಮ್ಮ ಹೊಣೆ ಎನ್ನುತ್ತಾ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಗಳಿಗೆ ಭೂಮಿ ಪೂಜೆ ಯನ್ನು ಮಾಡಿದರು

ಹೌದು ಧಾರವಾಡ ಗ್ರಾಮೀಣ ಕ್ಷೇತ್ರದ ಅಮ್ಮಿನಭಾವಿ ಗ್ರಾಮದಲ್ಲಿ ಅಂದಾಜು ಮೊತ್ತ 07 ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಲಾಯಿತು.ಅಂದಾಜು ಮೊತ್ತ 4 ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಲ ಜೀವನ ಮಿಷನ್ ಯೋಜನೆ ಯಡಿಯಲ್ಲಿ ಅಮ್ಮಿನಬಾವಿ ಗ್ರಾಮದ ಮನೆ ಮನೆಗೆ ಗಂಗೆ ಕಾಮಗಾರಿಗೆ ಚಾಲನೆ ನೀಡಲಾಯಿತು


ಅಂದಾಜು ಮೊತ್ತ 36 ಲಕ್ಷ ರೂಪಾಯಿ ಅನುದಾನದಲ್ಲಿ ಅಂಗನವಾಡಿ ನಂಬರ್ 01 ಮತ್ತು ನಂಬರ್ 05 ಕಟ್ಟಡ ನಿರ್ಮಾಣ ಕಾಮಗಾರಿ ಗೆ ಚಾಲನೆ ನೀಡಲಾಯಿತು
- ಅಂದಾಜು ಮೊತ್ತ 20 ಲಕ್ಷ ರೂ ಅನುದಾನದಲ್ಲಿ ST ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಕಾಂಕ್ರೀಟ್ ಗಟಾರ್ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಯನ್ನು ಮಾಡಲಾಯಿತು.ಹಾಗೇ ಅಂದಾಜು ಮೊತ್ತ 8 ಲಕ್ಷ ರೂ ಅನುದಾನದಲ್ಲಿ ಸಮರ್ಥ ರಾಮದಾಸ ಮಠದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಯನ್ನು ಮಾಡಲಾಯಿತು



ಅಂದಾಜು ಮೊತ್ತ 53 ಲಕ್ಷ ಅನುದಾನದಲ್ಲಿ ಮಲ್ಲಯ್ಯನ ಕೆರೆ ದಾರಿ ಸುಧಾರಣೆ.ಅಂದಾಜು ಮೊತ್ತ 53 ಲಕ್ಷ ಅನುದಾ ನದಲ್ಲಿ ಗ್ರಾಮದ ನಿಂಗೋಜಿ ರಸ್ತೆ ಸುಧಾರಣೆ ಕಾಮಗಾರಿ. ಅಂದಾಜು ಮೊತ್ತ 40 ಲಕ್ಷ ರೂ ಅನುದಾನದಲ್ಲಿ ಅಲ್ಪಸಂ ಖ್ಯಾತ ಅಭಿವೃದ್ಧಿ ನಿಗಮದ ಅಮ್ಮಿನಭಾವಿ ಗ್ರಾಮದ ಜೈನಬಸದಿ ಸಮುದಾಯ ಭವನ ಭೂಮಿಪೂಜೆಯನ್ನು ಸಲ್ಲಿಸಲಾಯಿತು


ಈ ಸಂದರ್ಭದಲ್ಲಿ ತವನಪ್ಪ ಅಷ್ಟಗಿ, ಸಂತೋಷ್ ಗೌಡ ಗೌಡರ್,ಮಹೇಶ್ ಯಲಿಗಾರ,ಗ್ರಾಮದ ಹಿರಿಯರಾದ ಮಲ್ಲೇಶಪ್ಪ ಹೊಸೂರ್,ಎಂ ಸಿ ಹುಲ್ಲೂರ,ಚನ್ನಬಸಪ್ಪ ಕೊಳ್ಳಿ,ಸುನಿಲ್ ಗುಡಿ,ಯಲ್ಲಪ್ಪ ಜಾನಕೂನವರ,ಮೌನೇಶ್ ಪತ್ತಾರ್,ಮಾಂತೇಶ ದತ್ತುನವರ,ಬಸವನ್ನೇಪ್ಪ ಪೂಜಾರ್, ರಾಮಚಂದ್ರ ದೇಶಪಾಂಡೆ,ನಿಂಗಪ್ಪ ಮಾದಿಗೊಂಡ್ ವಸಂತ ಪದಕಿ,ಮಹೇಶ್ ಕೋಳಿವಾಡ,ಅಶೋಕ್ ಗುಡಿ ಸೇರಿದಂತೆ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.