ಧಾರವಾಡ –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು ಹೌದು ಧಾರವಾಡ ನಗರ ಶಹರದ ವಾರ್ಡ ನಂ 04, 05, 06 & 07 ರಲ್ಲಿ ಹಲವು ಕಾಮಗಾರಿಗಳಿಗೆ ಭೂಮಿ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು.
ಧಾರವಾಡ ಶಹರದ ವಾರ್ಡ ನಂ 04 ರ ಮಟ್ಟಿ ಪ್ಲಾಟ್ ೮ ನೇ ಕ್ರಾಸ್ ಮತ್ತು ೫ನೇ ಕ್ರಾಸ್ ರಸ್ತೆಗಳ ಅಭಿವೃದ್ಧಿ ಕಾಮ ಗಾರಿ ಧಾರವಾಡ ಶಹರದ ವಾರ್ಡ ನಂ 06 ರ ಬಣಗಾರ ಓಣಿ ಮತ್ತು ಕಾದ್ರೋಳ್ಳಿ ಓಣಿ ರಸ್ತೆಗಳ ಅಭಿವೃದ್ಧಿ ಕಾಮ ಗಾರಿ,ಧಾರವಾಡ ಶಹರದ ವಾರ್ಡ ನಂ 05 ರ ಗಣೇಶನಗರ ಹಾಗೂ ಶಿಂಧೆ ಪ್ಲಾಟ್ ರಸ್ತೆ ಅಭಿವೃದ್ಧಿ ಕಾಮಗಾರಿ. ಧಾರವಾಡ ಶಹರದ ವಾರ್ಡ ನಂ 07 ರ ತುಳಜಾ ಭವಾನಿ ಗುಡಿ ಓಣಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.

ಈ ಸಂಧರ್ಭದಲ್ಲಿ ಪಾಲಿಕೆಯ ಸದಸ್ಯರಾದ ಈರೇಶ ಅಂಚಟಗೇರಿ,ಸುನಿಲ ಮೊರೆ,ನಿತಿನ್ ಇಂಡಿ,ಮಂಜು ಮಾಳೆ,ವಿನಾಯಕ್ ಗೋಂದಳಿ,ಬಸವರಾಜ್ ಪಳೋಟಿ ಸೇರಿದಂತೆ ವಾರ್ಡಿನ ಅನೇಕ ಗಣ್ಯರು ಮತ್ತು ಸಾರ್ವಜನಿ ಕರು ಉಪಸ್ಥಿತರಿದ್ದರು.