ಬೆಂಗಳೂರು –
ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಮ್ಮ ಕ್ಷೇತ್ರದ ಕೃಷಿ ವಿಶ್ವವಿದ್ಯಾಲಯದಲ್ಲಿನ ದಿನಗೂಲಿ ನೌಕರರ ಸಮಸ್ಯೆ ಕುರಿತು ಪ್ರಶ್ನೆ ಮಾಡಿದ್ದಾರೆ. ಹೌದು ಕಳೆದ ಹಲವಾರು ವರ್ಷಗಳಿಂದ ವಿವಿ ಯಲ್ಲಿ 1048 ದಿನಗೂಲಿ ಆಗಿ ಕೆಲಸವನ್ನು ಮಾಡುತ್ತಿದ್ದಾರೆ.ಖಾಯಂ ಇಲ್ಲದೇ ದಿನಗೂಲಿ ಆಗಿರುವ ಇವರಿಗೆ ಒಂದು ತಿಂಗಳಲ್ಲಿ ಕೇವಲ ಹದಿನೈದು ದಿನಗಳ ಮಾತ್ರ ಕೆಲಸ ಇನ್ನೂಳಿದ ದಿನಗಳಲ್ಲಿ ಕೆಲಸ ಇಲ್ಲದೇ ಇವರಿಗೆ ತುಂಬಾ ಕಷ್ಟ ಆಗಿದ್ದು ಇವರಿಗೆ ಕೃಷಿ ಅಧಿನಿಯಮ ಕಾಯ್ದೆಯ ವ್ಯಾಪ್ತಿಯಲ್ಲಿ ಖಾಯಂ ಗೊಳಿಸುವ ಕುರಿತು ಪ್ರಶ್ನೆ ಎತ್ತಿದ್ದಾರೆ.
ಶಾಸಕ ಅಮೃತ ದೇಸಾಯಿ ಅವರ ಪ್ರಶ್ನೆ ಗೆ ಉತ್ತರಿಸಿದ ಕೃಷಿ ಸಚಿವ ಬಿ ಸಿ ನಾಗೇಶ್ ಮಾತನಾಡಿ ಈಗಾಗಲೇ 298 ನೌಕರರಿಗೆ ಅನುಕೂಲ ಮಾಡಿಕೊಡಲಾಗಿದ್ದು ಇನ್ನೂಳಿದ ವರ ಕುರಿತು ಬರುವ ದಿನಗಳಲ್ಲಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ಇನ್ನೂ ಮತ್ತೆ ಶಾಸಕ ಅಮೃತ ದೇಸಾಯಿ ಮಾತನಾಡಿ ಕಾರ್ಮಿಕರಿಗೆ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ತೊಂದರೆ ಆಗುತ್ತಿದೆ ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯ ವನ್ನು ಮಾಡಿದರು.