This is the title of the web page
This is the title of the web page

Live Stream

June 2023
T F S S M T W
1234567
891011121314
15161718192021
22232425262728
2930  

| Latest Version 8.0.1 |

ಧಾರವಾಡ

ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸಿದ ವಿವಿಧ ರಾಜ್ಯದ ವಿದ್ಯಾರ್ಥಿಗಳನ್ನು ಬರಮಾಡಿಕೊಂಡ ಶಾಸಕ ಅಮೃತ ದೇಸಾಯಿ ಊಟ ವಸತಿ ಸೇರಿದಂತೆ ಎಲ್ಲವನ್ನೂ ಪರಿಶೀಲನೆ ನಡೆಸಿದ ಶಾಸಕರು…..


ಧಾರವಾಡ

ಹುಬ್ಬಳ್ಳಿ ಧಾರವಾಡ ದಲ್ಲಿ ರಾಷ್ಟ್ರೀಯ ಯುವ ಜನೋತ್ಸವದ ಕಲರವ ಆರಂಭಗೊಂಡಿದೆ ಇನ್ನೇನು ಮೂರು ದಿನಗಳು ಬಾಕಿ ಇರುವಾಗಲೇ ಅವಳಿ ನಗರದಲ್ಲಿ ಹಬ್ಬದ ವಾತಾವರಣ ಆರಂಭ ಗೊಂಡಿದ್ದು ಯುವ ಜನೋತ್ಸವದಲ್ಲಿ ಪಾಲ್ಗೊ ಳ್ಳಲು ದೇಶದ ಮೂಲೆ ಮೂಲೆಗಳಿಂದ ಕಲಾವಿ ದರು ಪಾಲ್ಗೊಳ್ಳುತ್ತಿದ್ದು ನಗರಕ್ಕೆ ಆಗಮಿಸಿದ ಕಲಾವಿದರನ್ನು ಶಾಸಕ ಅಮೃತ ದೇಸಾಯಿ ಬರಮಾಡಿಕೊಂಡರು.

ಹೌದು ಸ್ವಾಮಿ ವಿವೇಕಾನಂದರ ಜನ್ಮ ಜಯಂ ತಿಯ ಪ್ರಯುಕ್ತ ಜನವರಿ 12 ರಿಂದ 16 ರವರೆಗೆ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನೆಗೆ ಪ್ರಧಾನ ಮಂತ್ರಿ ಆಗಮಿಸುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲದಲ್ಲಿ ಜರಗುವ ಕಾರ್ಯಕ್ರಮ ಗಳಿಗೆ ಗೌರವಾಧ್ಯಕ್ಷರನ್ನಾಗಿ ಶಾಸಕ ಅಮೃತ ದೇಸಾಯಿ ಅವರನ್ನು ನೇಮಕ ಮಾಡಿದ್ದು ಇಂದು ಕೃಷಿ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿ  ಬೇರೆ ಬೇರೆ ರಾಜ್ಯಗಳಿಂದ ಆಗಮಿಸುತ್ತಿರುವ ಯುವ ಜನತೆಗೆ  ವಸತಿ ಊಟ  ಹಾಗೂ ಕಾರ್ಯಕ್ರಮದ ವ್ಯವಸ್ಥೆಯ ಕುರಿತು ಅಧಿಕಾರಿಗಳ ಜೊತೆ ಪರಿಶೀ ಲನೆ ನಡೆಸಿದರು ಮತ್ತು ಈಗಾಗಲೇ ಜಮ್ಮು ಕಾಶ್ಮೀರ ರಾಜ್ಯದಿಂದ ಆಗಮಿಸಿದ ವಿದ್ಯಾರ್ಥಿ ಗಳನ್ನು ಧಾರವಾಡಕ್ಕೆ ಆತ್ಮೀಯವಾಗಿ ಸ್ವಾಗತಿಸ ಲಾಯಿತು.

ಐದು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಯುವಕರು, ಪ್ರೇಕ್ಷಕರು ಜಿಲ್ಲೆಗೆ ಆಗಮಿಸುತ್ತಿದ್ದು ಸಕಲ ಸಿದ್ಧತೆಯ ಕುರಿತು ಮಾಹಿತಿ ಪಡೆದು ಎಲ್ಲಾ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಅಮೃತ ದೇಸಾಯಿ ಅವರು ಸೂಚಿಸಿದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News Join The Telegram Join The WhatsApp

 

 

Suddi Sante Desk

Leave a Reply