ಧಾರವಾಡ –
ಮಹಾಮಾರಿ ಕರೋನವನ್ನು ನಿಯಂತ್ರಣ ಮಾಡ ಲು ಹಗಲಿರುಳು ಶ್ರಮಿಸಿದ ಕರೋನ ವಾರಿಯರ್ಸ್ ಅವರಿಗೆ ಅಭಿನಂದಿಸಿ ಪ್ರಶಂಸನಾ ಪತ್ರವನ್ನು ನೀಡುವ ಕಾರ್ಯಕ್ರಮವನ್ನು ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮಾಡುತ್ತಿದ್ದು ಈ ಒಂದು ಕಾರ್ಯಕ್ರಮ ಕ್ಷೇತ್ರದಲ್ಲಿ ಮುಂದುವರಿದಿದೆ.
ಹೌದು ಕ್ಷೇತ್ರದಲ್ಲಿ 4 ನೇ ಹಂತದಲ್ಲಿ ಈ ಒಂದು ಕಾರ್ಯಕ್ರಮ ನಡೆಯುತ್ತಿದ್ದು ಮುಂದುವರಿದಿದೆ. ಶಾಸಕ ಅಮೃತ ದೇಸಾಯಿ ಪ್ರಶಂಸನಾ ಕಾರ್ಯ ಕ್ರಮ ಇಂದು ಎರಡು ಪಂಚಾಯತ ಗ್ರಾಮದಲ್ಲಿ ನಡೆಯಿತು.
ಕೊರೋನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಹಗಲಿರು ಳೆನ್ನದೆ ಸೇವೆಗೈದ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಸಿಬ್ಬಂದಿಗೆ ಹಾಗೂ ಗ್ರಾಮ ಪಂಚಾ ಯತ್ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಗೌರವಿ ಸುವ ಮಹಾನ್ ಕಾರ್ಯವನ್ನು ಧಾರವಾಡ ಗ್ರಾಮೀ ಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಹಾಗೂ ಅವರ ಗೆಳೆಯರ ಬಳಗದಿಂದ ಮಾಡುತ್ತಿದ್ದು ಇಂದು ಧಾರವಾಡ ತಾಲೂಕಿನ ಮಾರಡಗಿ, ಶಿವಳ್ಳಿ ಗ್ರಾಮ ಗಳ ವ್ಯಾಪ್ತಿಯ ಕೋರೋನಾ ಸೇನಾನಿಗಳಿಗೆ ಪ್ರಸಂಶನಾ ಪತ್ರದೊಂದಿಗೆ ಸಹಾಯಧನ ನೀಡಿ ಗೌರವ ಸಮರ್ಪಿಸಿದರು.
ನಂತರ ಮಾತನಾಡಿದ ಶಾಸಕ ಅಮೃತ ದೇಸಾಯಿ ಅವರು ಕೊರೋಣಾ ಸಂದರ್ಭದಲ್ಲಿ ಸಾಕಷ್ಟು ಸಾವು ನೋವುಗಳ ಮಧ್ಯೆಯೂ ಪ್ರತಿ ಗ್ರಾಮದ ಜನತೆಯನ್ನು ಪ್ರತಿ ಮನೆಗಳ ಮಕ್ಕಳಂತೆ ಗ್ರಾಮದ ಸೇವೆ ಮಾಡಿ ಕೊರೋಣಾ ಹಿಮ್ಮೆಟ್ಟಿಸುವಲ್ಲಿ ತಮ್ಮ ಜೀವ ಪಣವಿಟ್ಟು ಕೆಲಸ ನಿರ್ವಹಿಸಿ ಕೊರೋಣಾ ಸೇನಾನಿಗಳಿಗೇ ಈ ಸನ್ಮಾನ ಸಣ್ಣ ಸಮರ್ಪಣೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಾ ದಂಡಾಧಿಕಾರಿಗಳು ಸಂತೋಷ ಬಿರಾದಾರ, ಮಂಡಳ ಅಧ್ಯಕ್ಷರಾದ ರುದ್ರಪ್ಪ ಅರಿವಾಳ, ತೇಜಸ್ವಿನಿ ತಲವಾಯಿ,ನಾಗಪ್ಪ ತಿರ್ಲಾಪೂರ, ಸಹದೇವ ಹಾವೇರಿ, ಭೀಮಣ್ಣ ರಾಮದುರ್ಗ,ಗಂಗಾಧರ ಪಾಟೀಲ ಕುಲಕರ್ಣಿ,ಶಿವು ಬೆಳಾರದ, ಗಂಗಾಧರ ಪಾಟೀಲ್ ಕುಲಕರ್ಣಿ, ಹಂಪನವರ, ಅಶೋಕ ಕನಕಿಕೊಪ್ಪ, ಮಾರುತಿ ಪವಾರ್ ಅಶೋಕ ನಾವಳ್ಳಿ ,ರೇಣುಕಾ ಅರೆನ್ನವರ ಸೇರಿದಂತೆ ಅಮೃತ ದೇಸಾಯಿ ಗೆಳೆಯರ ಬಳಗದ ಯುವಮಿತ್ರರು ಉಪಸ್ಥಿತರಿದ್ದರು.
ವರದಿ – ಆತ್ಮಾನಂದ ಪಡಿಯನ್ನವರ