ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಗಳಿಗೆ ಭೂಮಿ ಪೂಜೆ ಕಾರ್ಯ ಕ್ರಮ ಗಳು ಮುಂದುವರಿದಿದೆ.ಹೌದು ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ವಾರ್ಡ ನಂ 10 ರ ಕೆಲಗೇರಿ ಯ ವಿಠ್ಠಲ್ ದೇವಸ್ಥಾನದ ಜೀರ್ಣೋದ್ದಾರದ ಭೂಮಿ ಪೂಜೆಗೆ ಹಾಗೂ ವಾರ್ಡ ನಂ 22 ರ ವಿದ್ಯಾಗಿರಿಯ ಅತ್ತಾರ್ ಅವರ ಮನೆಯ ಹತ್ತಿರ ತೆರೆದ ಚರಂಡಿ ಕಾಮಗಾರಿಗೆ ಭೂಮಿ ಪೂಜೆಗೆ ಶಾಸಕ ಅರವಿಂದ ಬೆಲ್ಲದ ನೆರವೇರಿಸಿದರು
ಈ ಸಂದರ್ಭದಲ್ಲಿ ಹು -ಧಾ ಪಶ್ಚಿಮ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಬಸವರಾಜ್ ಗರಗ,ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಕಲಾ ಕೊಟಬಾಗಿ, ಮುಖಂಡರಾದ ಶಂಕರ್ ಕೊಟ್ರಿ,ರುದ್ರಗೌಡ ಪಾಟೀಲ್ ಸೇರಿದಂತೆ ಸ್ಥಳೀಯ ನಾಗರಿಕರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು