ಧಾರವಾಡ –
ಶಾಸಕ ಅರವಿಂದ ಬೆಲ್ಲದ ಅವರು ತಮ್ಮ ಮುತ್ತಜ್ಜ ನವರಾದ ಧಾರವಾಡದ ದಿ.ಚನ್ನಬಸಪ್ಪ ಬೆಲ್ಲದ್ ಅವರು ನೂರು ವರ್ಷಗಳ ಹಿಂದೆ ಜೀವನದಲ್ಲಿ ಆಧ್ಯಾತ್ಮಿಕತೆ ಉಂಟಾಗಿ ಉತ್ತರ ಕರ್ನಾಟಕದಿಂದ ಮೈಸೂರು ಭಾಗದ ಚಿಲಕವಾಡಿ ಮಠಕ್ಕೆದಲ್ಲಿ ಮಹದೇಶ್ವರ ರು ಬಂದು ನೆಲೆಸಿ ತಪಸ್ಸು ಮಾಡಿ ಹೋಗಿದ್ದಾರೆ ಎಂಬ ವಿಚಾರ ಅರಿತು ಮುತ್ತಾತನವರು ಚಿಲಕವಾಡಿ ಮಠಕ್ಕೆ ಬಂದು ನೆಲೆಸಿ ತಪಸ್ಸು ಮಾಡಿ ಸನ್ಯಾಸತ್ವ ಪಡೆದು ಶಿವ ತತ್ವ,ಬಸವ ತತ್ವ ವನ್ನು ಈ ಭಾಗದ ಜನರಿಗೆ ಬೋಧಿಸುತ್ತ ಅನೇಕ ವರ್ಷ ಗಳ ಕಾಲ ಜೀವಿಸಿ ತದನಂತರ ಇಷ್ಟ ಲಿಂಗ ಧ್ಯಾನ ಮಾಡುತ್ತ ಜೀವ ಸಮಾಧಿ ಯಾಗಿದ್ದು ಆ ಸಮಾಧಿ ಗೆ ( ಗದ್ದುಗೆ ಗೆ ) ಪೂಜೆ ಸಲ್ಲಿಸಿದೆನು.
ಬಸವ ತತ್ವ ,12 ನೇ ಶತಮಾನದ ಶರಣರ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಪೂಜ್ಯನೀಯ ಚನ್ನಬಸಪ್ಪ ಬೆಲ್ಲದ್ ರವರು ಚಿಲಕವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹತ್ತಾರು ವರ್ಷಗಳ ಕಾಲ ಭೋದನೆ ಮಾಡುತ್ತ ಅಂತಿಮ ದಿನಗಳಲ್ಲಿ ಇಷ್ಟ ಲಿಂಗ ಪೂಜೆ ಮಾಡುತ್ತ ಜೀವ ಸಮಾಧಿ ಹೊಂದಿದ್ದರು.
ಇವರ ಗದ್ದುಗೆ ಗೆ ರೋಹಿಣಿ ಮಳೆಯ ನಕ್ಷತ್ರದ ಮೊದಲ ದಿನದಂದು ಸಂಜೆ ವೇಳೆಯಲ್ಲಿ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಈ ಗದ್ದುಗೆ ಗೆ ಪೂಜೆ ಸಲ್ಲಿಸಿ ಊರ ತುಂಬ ಮೆರವಣಿಗೆ ಮಾಡುವ ಪರಂಪರೆ ಇಂದಿಗೂ ಕೂಡಾ ಮುಂದುವರೆಯುತ್ತ ಇದೆ.
ಈ ಸಂಧರ್ಭದಲ್ಲಿ ಚಿಲಕವಾಡಿ ಮಠದ ಸ್ವಾಮಿ ಜೀಗಳು, ರೈತ ಮುಖಂಡರಾದ ಅಮ್ಮನಪುರದ ಮಲ್ಲೇಶ್ , ಚಿಲಕ ವಾಡಿ ಗ್ರಾಮದ ಮುಖಂಡ ರಾದ ಶ್ರೀಮತಿ ಗಾಯತ್ರಿ ಅಮ್ಮ ,ಲಿಂಗಾಯತ ಗೌಡ ಮಹಾಸಭ ಯುವ ಘಟಕ ಅಧ್ಯಕ್ಷರಾದ ಶಂಭು ಪಟೇಲ್ ವರಹಳ್ಳಿ,ಕಲ್ಮಹಳ್ಳಿ ಮಾದೇಶ್, ಚಿಲಕವಾಡಿ ಗಿರೀಶ್ ಸೇರಿದಂತೆ ಇನ್ನಿತರ ಗಣ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತ ರಿದ್ದರು