ಧಾರವಾಡ –
ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಐತಿಹಾಸಿಕ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ದಲ್ಲಿ ಪಾಲ್ಗೊಂಡು ಚಾಲನೆ ನೀಡಿದರು. ಹೌದು ಮುರುಘಾಮಠದ ಪರಮ ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ದಲ್ಲಿ ಧಾರವಾಡದ ಬಸವನಗರ ಹಿತಾಭಿವೃದ್ಧಿ ಸಂಘದ ವರು ಆಯೋಜಿಸಿದ್ದ ಮಾತೋಶ್ರೀ ಕರಿಯಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಚಾಲನೆ ನೀಡಿದರು

ಈ ಸಂದರ್ಭದಲ್ಲಿ, ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಕ ಲಾ ಕೊಟಬಾಗಿ,ಮುಖಂಡರಾದ ಅರವಿಂದ ಅರಳಿಕಟ್ಟಿ, ಹನುಮಂತ್ ಹರಿವಾಣ,ರಾಜು ಕೊಟಬಾಗಿ,ಷಣ್ಮುಖ ಹತ್ತಿಯವರ,ಶಂಕರ್ ಕೊಟ್ರಿ,ವಿಶ್ವನಾಥ್ ಶಿರೂರ್, ಶಾಂತೇಶ್ ಚಿಕ್ಕಲಕಿ,ರಘು ಹಿರೇಗೌಡ್ರ,ಪಾವನಗೌಡ ಹೊಸೂರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತ ರಿದ್ದರು.