ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ವಾರ್ಡ ನಂ 10ರ ನೆಹರು ನಗರದ ಸೈನಿಕ ಶಾಲೆಯಿಂದ ಕೆಲಗೇರಿವರೆಗೆ ತೆರೆದ ಚರಂಡಿ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕ ಅರವಿಂದ ಬೆಲ್ಲದ ನೆರವೇರಿಸಿದರು.ನಂತರ ಸ್ಥಳೀಯರ ಜೊತೆಗೆ ಕುಂದು ಕೊರತೆಯನ್ನು ಆಲಿಸಿ ವಿವಿಧ ಅಭಿವೃದ್ಧಿ ಗಳ ಕುರಿತು ಚರ್ಚಿಸಿದರು


ಈ ಸಂದರ್ಭದಲ್ಲಿ ಹು -ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಬಸವರಾಜ್ ಗರಗ,ಪಾಲಿಕೆ ಸದಸ್ಯ ರಾದ ಶ್ರೀಮತಿ ಚಂದ್ರಕಲಾ ಕೊಟಬಾಗಿ,ಮುಖಂಡರಾದ ಶಾಂತೇಶ್ ಚಿಕ್ಕಲಕಿ,ಶಂಕರ ಕೊಟ್ರಿ,ರುದ್ರಗೌಡ ಪಾಟೀಲ, ಶಹೇಮಾ ಹಂಚಿನಮನಿ ಸೇರಿದಂತೆ ಸ್ಥಳೀಯ ನಾಗರಿಕರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.