ಧಾರವಾಡ –
ವೇತನ ಪರಿಷ್ಕರಣೆ ಸೇರಿದಂತೆ ಕೆಲವೊಂದಿಷ್ಟು ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಯುತ್ತಿರುವ ಟಾಟಾ ಮಾರ್ಕೋ ಪೋಲೋ ಕಾರ್ಮಿಕರ ಪ್ರತಿಭಟನೆ ಮುಂದುವರೆದಿದ್ದು ಡಿಸಿ ಕಚೇರಿ ಮುಂದೆ ಬೇಡಿಕೆಗಳ ಈಡೇರಿಕೆಗಾಗಿ ಈ ಒಂದು ಹೋರಾಟವನ್ನು ಮಾಡುತ್ತಿದ್ದು ಕಾರ್ಮಿಕರ ಈ ಒಂದು ಹೋರಾಟಕ್ಕೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಭೇಟಿ ನೀಡಿ ಸಮಸ್ಯೆ ಆಲಿಸಿದರು
ಹೌದು ಧಾರವಾಡದ ಸಾವಿರಾರು ಕಾರ್ಮಿಕರಿಗೆ 2 ವರ್ಷದ ಬಾಕಿ ವೇತನದ ಪರಿಷ್ಕರಣೆಗಾಗಿ ಹಾಗೂ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ,ಟಾಟಾ ಮಾರ್ಕೋಪೋಲೋ ಕ್ರಾಂತಿಕಾರಿ ಕಾರ್ಮಿಕ ಯೂನಿಯನ್ ಅವರು ಜಿಲ್ಲಾಧಿ ಕಾರಿಗಳ ಕಛೇರಿ ಎದುರು 12 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಹಾಗೂ ನಾಲ್ಕು ದಿನಗಳಿಂದ ನಡೆಯು ತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸ್ಥಳಕ್ಕೆ ಭೇಟಿ ನೀಡಿ ಅವರ ಬೇಡಿಕೆಗಳನ್ನು ಹಾಗೂ ಸಮಸ್ಯೆಗಳನ್ನು ಆಲಿಸಿದರು