ಧಾರವಾಡ –
ನನಗೆ ಸಚಿವ ಸ್ಥಾನ ಕೊಡುವದು ಹೈಕಮಾಂಡಗೆ ಬಿಟ್ಟ ವಿಚಾರ ಎಂದು ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು ಧಾರವಾಡದಲ್ಲಿ ಮಾತನಾಡಿದ ಅವರು ಎಲ್ಲಾ ಶಾಸಕರು ಸಚಿವ ಆಗುವ ಆಕಾಂಕ್ಷೆ ಇಟ್ಡುಕೊಂಡಿರತ್ತಾರೆ ಅದರಲ್ಲಿ ಏನು ಹೊಸದಲ್ಲ ಎಂದರು ಇನ್ನೂ ಹೈ ಕಮಾಂಡ್ ಏನ್ ಮಾಡಬೇಕು ಎಂದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳು ತ್ತಾರೆಂದರು.

ನಾನು ಯಾರಿಗೂ ಸಚಿವ ಸ್ಥಾನವನ್ನು ಕೇಳ್ತಿಲ್ಲ ನನ್ನ ಕ್ಷೇತ್ರ ದಲ್ಲಿ ನಾನು ಕೆಲಸ ಮಾಡುತ್ತ ಇದ್ದೆನೆಂದರು.ಇನ್ನೂ ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು ಸಿಎಂ ಬಹಳ ಪ್ರಬುದ್ಧ ರಾಜಕಾರಣಿ ಅವರು ಏನೆ ಮಾಡುವದಿದ್ದರೂ ವಿಚಾರ ಮಾಡಿ ಮಾಡ್ತಾರೆ.ಏನೇ ಮಾಡಿದರೂ ಒಳ್ಳೆ ನಿರ್ಧಾರ ಮಾಡಿದ್ದಾರೆ ಹೊಸ ಎಕ್ಸ್ಪಿರಿ ಮೆಂಟ್ ಮಾಡಬೇಕಾಗುತ್ತೆ ಮೊದಲು ಆಯಾ ಜಿಲ್ಕೆಯ ವರಿಗೆ ಆಯಾ ಅದೇ ಜಿಲ್ಲೆ ಕೊಡುವ ಪರಿಪಾಠ ಇತ್ತು ಇವತ್ತು ಬೇರೆ ಜಿಲ್ಲೆಯವರು ಬರುವುದಿದರಿಂಸ ಹೊಸ ಹುರುಪು ಇರುತ್ತೆ ಎಂದರು
ಹೊಸ ಜಿಲ್ಲಾ ಉಸ್ತುವಾರಿ ಬರುವುದರಿಂದ ಅವರು ಹೊಸ ದೃಷ್ಟಿಯಿಂದ ನೋಡ್ತಾರೆಂದರು.ಒಳ್ಳೆಯದಾಗುತ್ತೆ ಎಂದು ಸಿಎಂ ಪ್ರಯೋಗ ಮಾಡಿದ್ದಾರೆ ಕೆಲ ಜಿಲೆ ಬಿಟ್ಟು, ಉಳಿದ ಜಿಲ್ಲೆಗಳಿಗೆ ಉಸ್ತುವಾರಿ ಮಾಡಿದ್ದಾರೆ, ಅದರಿಂದ ಒಳ್ಳೆಯ ದಾಗುತ್ತೆ ಸಚಿವ ರಾಮುಲುಗೆ ಬಳ್ಳಾರಿ ಕೊಟ್ಟ ವಿಚಾರ ಒಬ್ಬರ ಮನಸ್ಸು ನೋಯಿಸಿ ಬೇರೆ ಕೊಡುವದು ಇದರಲ್ಲಿ ಪ್ರೀತಿಯಿಂದ ರಾಮುಲು ಬಳ್ಳಾರಿ ಕೇಳಿದ್ದಕ್ಕೆ ಕೊಟ್ಟಿರ ಬಹುದೆಂದರು.ಪಂಚಮಸಾಲಿ ಮೂರನೇ ಪೀಠ ವಿಚಾರ ಕುರಿತು ಮಾತನಾಡಿದ ಅವರು ಮೊದಲನೇದಾಗಿ ಎರಡು ಪೀಠನೇ ಆಗಬಾರದು ಸಮಾಜದಲ್ಲಿ ಒಂದು ಪೀಠ ಆಗಿದ್ದು ಸಾಕಾಗಿತ್ತು ಯಾವುದೇ ಕಾರಣಕ್ಕೆ ಮೂರನೇ ಪೀಠ ಆಗಬಾರದು ಸಮಾಜ ಅದನ್ನ ಒಪ್ಪಿಕೊಳ್ಳಲ್ಲವೆಂದರು. ಹರಿಹರ ಪೀಠ ಹಾಗೂ ಕೂಡಲ ಸಂಗಮ ಪೀಠದ ಸ್ವಾಮೀಜಿಯವರ ನಡುವೆ ವೈಮನಸ್ಸು ಇರುವದು ನಿಜ ಕೂಡಲಸಂಗಮ ಪೀಠ ಜನ ಒಪ್ಪಿಕೊಂಡಂತ ಪೀಠ ಇದಾಗಿದೆ.ಹೋರಾಟ ಆರಂಭ ಮಾಡಿದ್ದು ಜಯಮೃತ್ಯುಂ ಜಯ ಸ್ವಾಮೀಜಿ ಅದು ಜನ ಒಪ್ಪದ ಪೀಠ ಎಂದು ಹೇಳಲು ಸಾಧ್ಯವಿಲ್ಲ ಯಾವುದೇ ಕಾರಣಕ್ಕೂ ಮೂರನೇ ಪೀಠ ಆಗಬಾರದು ಅದು ಸಲ್ಲದು ಎಂದರು.