ಬೆಳಗಾವಿ –
ಸಚಿವ ಸ್ಥಾನ ಕೈತಪ್ಪಿದ ವಿಚಾರ ಕುರಿತಂತೆ ಹುಬ್ಬಳ್ಳಿ ಧಾರವಾಡ ಪಶ್ಛಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅಸಮಾಧಾನಗೊಂಡಿದ್ದಾರೆ.

ಬೆಳಗಾವಿಯ ಮಾತನಾಡಿದ ಅವರು ಬೆಳಗಾವಿಯಲ್ಲಿ ನಡೆಯಲಿರುವ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದಿದ್ದೇವೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಶಾಸಕರಲ್ಲಿ ಅಸಮಾಧಾನ ಇರುವುದು ಸಹಜವಾದರೂ ಆ ಕುರಿತು ಪ್ರಸ್ತಾಪಿಸಲು ಇದು ಸ್ಥಳವಲ್ಲ. ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಈ ಕುರಿತಂತೆ ಚರ್ಚಿಸುತ್ತೇನೆ ಎಂದರು.
ಇನ್ನೂ ಬೆಳಗಾವಿಯಲ್ಲಿ ನಡೆಯಲಿರುವ ಜನಸೇವಕ ಸಮಾವೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ಒಂದು ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ್ದೇನೆ ಸಂಪುಟದಲ್ಲಿ ಸ್ಥಾನ ಸಿಗದದಕ್ಕೆ ಅಸಮಾಧಾನ ಶಾಸಕರಲ್ಲಿ ಇರುವುದು ಸಹಜ.ಅದನ್ನು ನಾವು ಭೇಟಿಯಾದಾಗ ಚರ್ಚಿಸುತ್ತೆನೆ ಎಂದರು.

ಆದರೆ ಈ ಕುರಿತು ಪ್ರಸ್ತಾಪಿಸಲು ಇದು ಸ್ಥಳವಲ್ಲ. ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಮಾತನಾಡುತ್ತೇವೆ.ಇನ್ನು ಬಸನಗೌಡ ಪಾಟೀಲ ಹೇಳಿರುವ ಮಾತಿನ ಕುರಿತಂತೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.

ಒಟ್ಟಿನಲ್ಲಿ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಶಾಸಕ ಅರವಿಂದ ಬೆಲ್ಲದ ಬೆಳಗಾವಿಗೆ ಬಂದಿದ್ದು, ಈ ವೇಳೆ ಶಾಸಕರ ಅಸಮಾಧಾನ ಕುರಿತಂತೆ ನಾಯಕರೊಂದಿಗೆ ಏನನ್ನೂ ಮಾತನಾಡುವುದಿಲ್ಲ ಎನ್ನುತ್ತಾ ತೆರಳಿದರು.