ಧಾರವಾಡ –
ಸಚಿವ ಉಮೇಶ ಕತ್ತಿ ನಿಧನಕ್ಕೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಸಂತಾಪ ವನ್ನು ಸೂಚಿಸಿದ್ದಾರೆ.ಇದೊಂದು ದುಃಖಕರ ವಿಚಾರವಾಗಿದ್ದು ರಾಜ್ಯದ ಕ್ರಿಯಾಶೀಲ ದಕ್ಷ ಸಚಿವರಾದ ಉಮೇಶ ಕತ್ತಿಯವರ ನಿಧನ ದುಃಖಕರ ಮತ್ತು ಆಘಾತ ಕಾರಿ ಸಂಗತಿ ಎಂದರು
ಎಂಟು ಬಾರಿ ಶಾಸಕರಾಗಿ,ಸಚಿವರಾಗಿ ಕಾರ್ಯನಿರ್ವಹಿಸಿ ದವರು.ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು.ನೇರ ಮತ್ತು ನಿಷ್ಠುರ ರಾಜಕಾರಣಿ ಆಗಿದ್ದ ಉಮೇಶ ಕತ್ತಿಯರ ಅಗಲಿಕೆಯಿಂದ ರಾಜ್ಯ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಹಾನಿಯಾಗಿದೆ.ಅವರ ಕುಟುಂಬದವರು ಕಾರ್ಯಕರ್ತರು ಮತ್ತು ಅಭಿಮಾನಿಗಳು ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ