ಹುಬ್ಬಳ್ಳಿ-
ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪತ್ರಿಕಾಗೋಷ್ಠಿ ಕುತೂಹಲ ಮೂಡಿಸಿದೆ . ಸಚಿವ ಸ್ಥಾನ ವಿಚಾರ ಕುರಿತು ಈಗಾಗಲೇ ಅಸಮಾಧಾನಗೊಂಡಿದ್ದ ಬೆಲ್ಲದ ಇಂದು ದಿಢೀರ್ ನೇ ಸುದ್ದಿಗೋಷ್ಠಿ ಕರೆದಿದ್ದಾರೆ.

ಇತ್ತೀಚೆಗಷ್ಟೇ ವಿಸ್ತರಣೆಯಾದ ಸಚಿವ ಸಂಪುಟದಲ್ಲಿ ಸಚಿವಾಕಾಂಕ್ಷಿ ಆಗಿದ್ದ ಬೆಲ್ಲದ ಗೆ ನಿರಾಸೆ ಆಗಿತ್ತು ಈ ಒಂದು ವಿಚಾರ ಕುರಿತು ದೆಹಲಿಗೆ ತೆರಳಿ ಮಾತನಾಡುವುದಾಗಿ ಹೇಳಿದ್ದರು.

ಮುಖ್ಯಮಂತ್ರಿಗಳ ವಿರುದ್ಧ ಬಹಿರಂಗವಾಗೇ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಹೈ ಕಮಾಂಡ್ ನೊಂದಿಗೆ ಮಾತನಾಡುವುದಾಗಿ ಹೇಳಿ ಈಗ ಏಕಾಏಕಿಯಾಗಿ ಪತ್ರಿಕಾಗೋಷ್ಠಿ ಕರೆದು ಕುತೂಹಲ ಮೂಡಿಸಿದ್ದಾರೆ.