ಬೆಂಗಳೂರು –
ಹಾವೇರಿಯ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ಶಾಸಕ ನೆಹರು ಓಲೇಕಾರ್ ಹಾಗೂ ಇಬ್ಬರು ಪುತ್ರ ಸೇರಿ ಐವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಎರಡು ವರ್ಷ ಜೈಲು ಎರಡು ಸಾವಿರ ದಂಡ ವಿಧಿಸಿ ಆದೇಶ ಪ್ರಕಟಿಸಿದೆ. 2012 ರಲ್ಲಿ ನಗರಸಭೆ ಕಾಮಗಾರಿಯಲ್ಲಿ ಅವ್ಯವಹಾರ ಮಾಡಿದ್ದ ಪ್ರಕರಣದಲ್ಲಿ ನೆಹರು ಓಲೇಕಾರ ಮಕ್ಕಳು ಹಾಗೂ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ
ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ 35 ಲಕ್ಷ ರೂಪಾಯಿ ಮೋಸ ಮಾಡಿದ್ದ ಎಂಟು ಆರೋಪಿ ಗಳ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿತ್ತು ನ್ಯಾಯಾಲಯದ ವಿಚಾರಣೆ ವೇಳೆ ಸುಳ್ಳು ಕ್ಲಾಸ್ ಓನ್ ಗುತ್ತಿಗೆದಾರ ಪ್ರಮಾಣ ಪತ್ರ ಪಡೆದು ಕಾಮಗಾರಿ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಕೋರ್ಟ್ ಈ ಒಂದು ಶಿಕ್ಷೆ ಯನ್ನು ವಿಧಿಸಿದೆ.
ಪ್ರಕರಣದಲ್ಲಿ ಎ1 ನೆಹರು ಓಲೇಕಾರ್, ಎ2 ಮಂಜುನಾಥ್ ಓಲೇಕಾರ್, ಎ3 ದೇವರಾಜ್ ಓಲೇಕಾರ್, ಎ4 ಎಚ್ ಕೆ ರುದ್ರಪ್ಪ, ಎ5 ಎಚ್.ಕೆ. ಕಲ್ಲಪ್ಪ, ಎ7 ಶಿವಕುಮಾರ್ ಪಿ, ಎ8 ಚಂದ್ರಮೋ ಹನ್ ಪಿ.ಎಸ್ ಸೇರಿದಂತೆ 8 ಮಂದಿ ಅಪರಾಧಿ ಗಳು ತಪ್ಪು ಎಸಗಿರುವುದು ಸಾಬೀತಾಗಿದೆ.ಇತ್ತ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅಪರಾಧಿಗಳು ಜಾಮೀ ನಿಗೆ ಅರ್ಜಿ ಸಲ್ಲಿಕೆ ಮಾಡಿದ್ದು ಶಾಸಕ ಓಲೇಕಾರ್ ಸೇರಿದಂತೆ ಇಬ್ಬರು ಪುತ್ರರಿಗೂ ಹಾಗೂ ಅಧಿಕಾರಿ ಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ
ಇನ್ನೂ ಹಾವೇರಿ ಶಾಸಕ ನೆಹರು ಓಲೇಕಾರ್ ಅವರು ತಮ್ಮ ಇಬ್ಬರು ಪುತ್ರರಿಗೆ ಅಕ್ರಮವಾಗಿ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ನೀಡಿ ಸ್ವಜನಪಕ್ಷ ಪಾತ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಲಾಗಿತ್ತು ದೂರಿನಲ್ಲಿ ಗುತ್ತಿಗೆದಾರರಾಗಿ ರುವ ಶಾಸಕರ ಪುತ್ರರಿಗೆ 50 ಲಕ್ಷ ರೂಪಾಯಿಗೂ ಅಧಿಕ ಕಾಮಗಾರಿ ಗುತ್ತಿಗೆ ನೀಡಲಾಗಿದೆ ಆರೋ ಪಿಸಲಾಗಿತ್ತು.
ಈ ದೂರಿನ ಅನ್ವಯ ವಿಶೇಷ ನ್ಯಾಯಾಲಯ ಪ್ರಕರಣದ ತನಿಖೆಯನ್ನು ದಾವಣಗೆರೆ ಲೋಕಾ ಯುಕ್ತ ಪೊಲೀಸರಿಗೆ ವಹಿಸಿತ್ತು ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಒಟ್ಟು 9 ಮಂದಿ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು….