ದಾವರಗೆರೆ –
ಕೋತಿಯಿಂದ ಕೂದಳೆಲೆಯ ಅಂತರದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಬಚಾವ್ ಆಗಿದ್ದಾರೆ. ಹೌದು ಇಂಥಹದೊಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕಳೆದ ಒಂದು ತಿಂಗಳಿನಿಂದ ಹೊನ್ನಾಳ್ಳಿ ಪಟ್ಟಣದ ಜನರ ನಿದ್ದೆಗೆಡಿಸಿದ್ದ ಕೋತಿಯೊಂದು, ಇಂದು ಶಾಸಕ ರೇಣುಕಾಚಾರ್ಯರ ಮೇಲೆ ದಾಳಿ ಮಾಡಲು ಮುಂದಾಗಿರುವಂತಹ ಘಟನೆ ಪಟ್ಟಣದ ತಾಲೂಕ ಪಂಚಾಯಿತಿ ಕಚೇರಿ ಮುಂದೆ ನಡೆದಿದೆ.

ಶಾಸಕ ರೇಣುಕಾಚಾರ್ಯ ತಮ್ಮ ಪಕ್ಷದ ಮುಖಂಡರು ಬೆಂಬಲಿಗರೊಂದಿಗೆ ಕಚೇರಿಯತ್ತ ಹೋಗುತ್ತಿರುವಾಗ ಏಕಾಏಕಿ ರೇಣುಕಾಚಾರ್ಯರ ಮೇಲೆ ಕೋತಿ ಎರಗಿದೆ.

ಈ ಒಂದು ಸಮಯದಲ್ಲಿ ಕೂದಳಲೆಯ ಅಂತರದಲ್ಲಿ ಬಚಾವ್ ಆಗಿದ್ದಾರೆ. ಸ್ವಲ್ಪ ಯಾಮಾರಿದ್ರೆ ಕೋತಿ ದಾಳಿ ಮಾಡುವ ಸಾಧ್ಯತೆಯಿತ್ತು ಅಂತಾ ಖುದ್ದಾಗಿ ಶಾಸಕ ಎಮ್ ಪಿ ರೇಣುಕಾಚಾರ್ಯರೇ ಹೇಳಿದ್ದಾರೆ.

ಕಳೆದ ಒಂದು ತಿಂಗಳಿಂದ ಹೊನ್ನಾಳಿ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ಈ ಕೋತಿ ಕಾಡುತ್ತಿದೆ ಸಿಕ್ಕಾಪಟ್ಟಿ ಕಾಡುತ್ತಿರುವ ಈ ಒಂದು ಕೋತಿ ಈಗವರೆಗೆ 20 ಕ್ಕೂ ಹೆಚ್ಚು ಅಧಿಕ ಜನರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.
ಈಗ ಶಾಸಕರ ಮೇಲೂ ದಾಳಿಯಾಗುತ್ತಿತ್ತು ಸಮಯ ತುಂಬಾ ಚನ್ನಾಗಿದೆ ಶಾಸಕರಿಗೆ ಏನು ಆಗಿಲ್ಲ ಇನ್ನೂ ಇದನ್ನು ಗಂಭೀರವಾಗಿ ತಗೆದುಕೊಂಡ ಶಾಸಕ ರೇಣುಕಾಚಾರ್ಯ ಕೋತಿಯನ್ನು ಸೆರೆ ಹಿಡಿಯಲು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ಕಾಟ ಕೊಡುತ್ತಿದ್ದ ಕೋತಿಯನ್ನು ಸೆರೆ ಹಿಡಿದ್ರು.
ಇನ್ನೂ ಈವರೆಗೆ ಕೋತಿ ಕಾಟದ ಕುರಿತು ಸಾರ್ವಜನಿಕರು ಹೇಳಿ ಹೇಳಿ ಬೇಸತ್ತಿದ್ದರು. ಇಂದು ಶಾಸಕರ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೊನೆಗೂ ಕಾಟ ಕೊಡುತ್ತಿದ್ದ ಕೋತಿಯನ್ನು ಬಲೆಗೆ ಹಾಕಿದ್ದಾರೆ.