ಗುವಾಹಟಿ –
ಮಹಾಮಾರಿ ಕೋವಿಡ್ ಗೆ ಅಸ್ಸಾಂ ರಾಜ್ಯದಲ್ಲಿ ಶಾಸಕರೊಬ್ಬರು ಮೃತರಾಗಿದ್ದಾರೆ ಹೌದು ರಾಜ್ಯದ ಗೋಸೈಗಾಂವ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಭಾರಿ ಶಾಸಕರಾಗಿದ್ದ ಮಜೇಂದ್ರ ನಾರ್ಜರಿ ಕೊರೊ ನಾ ಸೋಂಕಿಗೆ ಬಲಿಯಾಗಿದ್ದಾರೆ. ಬೋಡೊಲ್ಯಾಂ ಡ್ ಪೀಪಲ್ಸ್ ಫ್ರಂಟ್ ಪಕ್ಷದ ನಾಯಕರಾಗಿದ್ದ 68 ವರ್ಷದ ಮಜೇಂದ್ರ ಅವರು ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ.

ಹೌದು ನಾಲ್ಕನೆಯ ಭಾರಿ ಶಾಸಕರಾಗಿ ಮಜೇಂದ್ರ ಅವರು ಇತ್ತಿಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆ ಆಗಿದ್ದರು ಮಜೇಂದ್ರ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಗುವಾಹಟಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಕೇಶಬ್ ಮಹಾಂತ ತಿಳಿಸಿ ದ್ದಾರೆ.