BSY ಗೆ ಅಭಿನಂದನೆ ಸಲ್ಲಿಸಿದ ಶಾಸಕ ಅಮೃತ ದೇಸಾಯಿ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿ ಶುಭಾಶಯ ಕೋರಿಕೆ ಶಾಸಕರಿಗೆ ಸಾಥ್ ನೀಡಿದ ಮಹಾದೇವ ಅಳಗವಾಡಿ, ಸೇರಿದಂತೆ ಹಲವರು…..

Suddi Sante Desk

ಬೆಂಗಳೂರು –

ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿ ‌ಸದಸ್ಯರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನೇಮಕಗೊಂಡ ಹಿನ್ನಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ರವರಿಗೆ ಶುಭಾಶಯ ಕೋರಿದರು.

ಬೆಂಗಳೂರಿನಲ್ಲಿ ನಿವಾಸಕ್ಕೆ ಶಾಸಕ ಅಮೃತ ದೇಸಾಯಿ ತೆರಳಿ ಶುಭಾಶಯಗಳನ್ನು ಕೋರಿದರು.ಇದೇ ವೇಳೆ ಅಭಿನಂದನೆಗಳನ್ನು ಸಲ್ಲಿಸಿದ ಶಾಸಕರು ಶುಭ ಹಾರೈಸಿ ದರು.ಕೆಲವೊತ್ತು ಯಡಿಯೂರಪ್ಪ ಅವರೊಂದಿಗೆ ಸಮಯ ಕಳೆದು ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.

ಈ ಒಂದು ಸಮಯದಲ್ಲಿ ಕೆಪಿಟಿಸಿಎಲ್ ನಿರ್ದೇಶಕರಾದ ಮಹಾದೇವ ಅಳಗವಾಡಿ,ಗುತ್ತಿಗೆದಾರ ಅಶೋಕ ದೇಶಪಾಂಡೆ.ಸಂತೋಷ ಚಳಗೇರಿ,ಸಂತೋಷ ದೇವರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.