ಧಾರವಾಡ –
ಧಾರವಾಡ ಜಿಲ್ಲಾಡಳಿತ ಮೇ.22 ಮತ್ತು 23 ರಂದು ಜಾರಿ ಮಾಡಿದ್ದ ಲಾಕ್‌ಡೌನ್ ನ್ನು ಮತ್ತೆ ಜಿಲ್ಲಾಡಳಿತ ವಿಸ್ತರಣೆಯನ್ನು ಮಾಡಿದೆ. ಜೂನ್ 7 ರವರೆಗೆ ಈ ಒಂದು ಲಾಕ್ ಡೌನ್ ನ್ನು ವಿಸ್ತರಣೆ ಮಾಡಿ ಆದೇಶ ವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ.ಹೌದು ಎರಡು ದಿನಗಳ ಈ ಒಂದು ಲಾಕ್ ಡೌನ್ ಗೆ ಜಿಲ್ಲೆಯಲ್ಲಿ ಸಾರ್ವಜನಿಕರು ಉತ್ತಮ ಸ್ಪಂದನೆ ನೀಡಿದ್ದಾರೆ. ಸರಕಾರದ ಆದೇಶದಂತೆ ನಾಳೆ ಮೇ.24 ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 7 ರ ಬೆಳಿಗ್ಗೆ 6 ಗಂಟೆ ವರೆಗೆ ಜಿಲ್ಲೆಯಲ್ಲಿಯೂ ಲಾಕ್‌ಡೌನ್ ವಿಸ್ತರಿಸಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಿರ್ಣಯದಂತೆ ಇನ್ನಷ್ಟು ಕಠಿಣ ನಿಯಮಗಳನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.ನಗರ ಪೊಲೀಸ್ ಆಯುಕ್ತ ಲಾಬೂರಾಮ್,ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಪಿ.ಕೃಷ್ಣಕಾಂತ ಅವರೊಂದಿಗೆ ವರ್ಚುವಲ್ (ಆನ್‌ಲೈನ್) ಮೂಲಕ ಸುದ್ಧಿಗೋಷ್ಠಿ ನಡೆಸಿ ಮಾತ ನಾಡಿದರು.ಜಿಲ್ಲೆಯಲ್ಲಿ ಮೇ 22 ಮತ್ತು 23 ರಂದು ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಕೇವಲ ಹಾಲು, ಹಣ್ಣು, ತರಕಾರಿ ಖರೀದಿಸಲು ಬೆಳಿ ಗ್ಗೆ 6 ರಿಂದ 8 ಗಂಟೆ ವರೆಗೆ ಅವಕಾಶ ನೀಡಲಾಗಿತ್ತು ಮತ್ತು ಆಸ್ಪತ್ರೆ,ಔಷಧಿ ಅಂಗಡಿ ತೆರೆಯಲು,ಸರಕು ಸಾಗಾಟ ವಾಹನ,ಅಂಬ್ಯುಲೆನ್ಸ್, ಕೊವೀಡ್ ಕರ್ತ ವ್ಯ ನಿರತ ಅಧಿಕಾರಿ, ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.ಅದರಂತೆ ನಾಳೆ ಮೇ 24 ರ ಬೆಳಿಗ್ಗೆ 6 ರಿಂದ ಜೂನ್ 7 ರ ಬೆಳಿಗ್ಗೆ 6 ರವರೆಗೆ ರಾಜ್ಯಾದಾದ್ಯಂತ ಲಾಕ್‌ಡೌನ್ ವಿಸ್ತರಿಸಲಾಗಿದ್ದು ಜಿಲ್ಲೆಯಲ್ಲಿ ಲಾಕ್‌ಡೌನ್ ಇನ್ನಷ್ಟು ಪರಿಣಾಮಕಾರಿ ಯಾಗಿ ಜಾರಿಗೊಳಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನ ವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಏನೇನಿರುತ್ತದೆ
ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆ ಯವರೆಗೆ ಹಾಲು ತರಕಾರಿ ಹಣ್ಣು ಖರೀದಿಗೆ ಮಾತ್ರ ಅವಕಾಶ

ಏನೇನಿರೊದಿಲ್ಲ
ಕಿರಾಣಿ ಅಂಗಡಿ, ಮಧ್ಯದ ಅಂಗಡಿ, ಹೊಟೇಲ್ ಗಳಲ್ಲಿ ಪಾರ್ಸಲ್ ವ್ಯವಸ್ಥೆ,ಇನ್ನಿತರ ಯಾವುದೇ ಅಂಗಡಿ ಮುಂಗಟ್ಟು ತೆರೆಯಲು ಅವಕಾಶವಿಲ್ಲ
ಇವುಗಳು ಸಂಪೂರ್ಣ ನಿಷೇಧ
ಜಿಲ್ಲೆಯಲ್ಲಿ ಸಾರ್ವಜನಿಕ ಆರೋಗ್ಯ ಹಿತದೃಷ್ಠಿ ಯಿಂದ ಜೂನ್ 7 ರ ವರೆಗೆ ಮದುವೆ,ಗೃಹ ಪ್ರವೇಶ, ಹುಟ್ಟು ಹಬ್ಬ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇ ಧಿಸಲಾಗಿದೆ.
ಕಾರ್ಯನಿರ್ವಹಿಸುವವರು ಕೃಷಿ ಇಲಾಖೆಯ ಸಂಭಂಧಿಸಿದ ವಸ್ತುಗಳು ಮತ್ತು ಸಂಬಂಧಿತ ಕೈಗಾರಿಕೆ,ರಕ್ಷಣಾ ಇಲಾಖೆಗೆ ಸರಕು ಪೂರೈಸುವ ಕೈಗಾರಿಗೆ,ನಿರಂತರ ಉಷ್ಣತೆ ಅಗತ್ಯ ವಿರುವ ಕೈಗಾರಿಕೆಗಳು ಮಾತ್ರ ಕಾರ್ಯ ನಿರ್ವಹಿಸು ತ್ತವೆ.ಅಂಬ್ಯುಲೆನ್ಸ್, ಕೊವೀಡ್ ಕರ್ತವ್ಯದಲ್ಲಿರುವ ಅಧಿಕಾರಿ ವಾಹನ, ಕರ್ತವ್ಯಕ್ಕೆ ನಿಯೋಜನೆಗೊಂಡ ವಾಹನ, ಮಾದ್ಯಮದವರು, ಬೆಳಿಗ್ಗೆ ಪತ್ರಿಕೆ ವಿತರಿಕ ರಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದ್ದು. ಅಧಿಕೃತ ಪಾಸ್ ಹಾಗೂ ಅನುಮತಿಸಲಾದ ತುರ್ತು ಕರ್ತವ್ಯ ದ ಬಗ್ಗೆ ಪೂರಕ ಸಾಕ್ಷಿಯನ್ನು ಹೊಂದಿರಬೇಕು
ಇದಕ್ಕೆ ಅರ್ಜಿ ಸಲ್ಲಿಸಿದರೆ ಅವಕಾಶ ನೀಡಲಾಗುತ್ತದೆ
ಎಲ್ಲ ಕಡೆ ಹೋಟೆಲ್ ಖಾನಾವಳಿ ಬಂದ್ ಇರುವುದ ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ ಮತ್ತು ರೋಗಿಯ ಸಹಾಯಕ್ಕೆ ಇರುವವರಿಗೆ ಮಾತ್ರ ಊಟ, ಉಪಹಾರಕ್ಕೆ ಅನುಕೂಲವಾಗಲು ಆಯಾ ಆಸ್ಪತ್ರೆಯ ಬಳಿ ಇರುವ ಮತ್ತು ಆಯಾ ಆಸ್ಪತ್ರೆಯವರು ಈ ಕುರಿತು ಅರ್ಜಿ ಸಲ್ಲಿಸಿದರೆ ಮಾತ್ರ ಒಂದು ಹೋಟೆಲ್‌ಗೆ ಅನುಮತಿ ನೀಡಲಾಗು ವುದು. ಆ ಹೋಟೆಲ್‌ನವರು ನಿಯಮ ಮೀರಿ ಸಾರ್ವಜನಿಕರಿಗೆ ಆಹಾರ ವಿತರಿಸಿದರೆ ಅದನ್ನು ಬಂದ್ ಮಾಡಲಾಗುತ್ತದೆ.ಜಿಲ್ಲೆಯಲ್ಲಿ 9 ಇಂದಿರಾ ಕ್ಯಾಂಟಿನ್‌ಗಳಿದ್ದು ಅಲ್ಲಿಯೂ ಸಹ ಊಟ, ಉಪ ಹಾರ ವಿತರಿಸಲಾಗುತ್ತಿದೆ.ಅಗತ್ಯವಿರುವವರು ಇದರ ಉಪಯೋಗ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗಳು ಹೇಳಿದರು.
ಅವಳಿ ನಗರದಲ್ಲಿ ಎಲ್ಲೇಲ್ಲಿ ಕಂಟೈನ್ಮೆಂಟ್ ಝೋನ್ ಗಳು
ಅವಳಿ ನಗರದಲ್ಲಿ ಹಲವು ಬಡಾವಣೆಗಳಲ್ಲಿ ಕಂಟೈ ನ್ಮೆಂಟ್ ಝೋನ್ ಗಳನ್ನು ಮಾಡಲಾಗಿದ್ದು ಧಾರ ವಾಡದ ಸಿದ್ಧೇಶ್ವರ ಕಾಲೋನಿ ಸೇರಿ ಒಟ್ಟು 5 ಕಂಟೈನ್ಮೆಂಟ್ ಝೋನ್‌ಗಳನ್ನು ಮಾಡಲಾಗಿದೆ. ಕಂಟೈನ್ಮೆಂಟ್ ಝೋನ್‌ಗಳಲ್ಲಿ ಮಹಾನಗರ ಪಾಲಿಕೆ,ಪೊಲೀಸ್, ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಗತ್ಯವಿರುವ ವ್ಯವಸ್ಥೆ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿನ ಲಕ್ಷಣ ವಿರುವವರು ಟೆಸ್ಟಿಂಗ್‌ಗೆ ಬಂದಾ ಗಲೇ ಅವರಿಗೆ ಔಷಧಿ ಕಿಟ್ ನೀಡಲು ತೀರ್ಮಾನಿಸ ಲಾಗಿದೆ.ಆದಷ್ಟು ಬೇಗ ಎಲ್ಲ ಕೋವಿಡ್ ಟೆಸ್ಟಿಂಗ್ ವಾಹನಗಳಲ್ಲಿ ಕೊರೊನಾ ರೋಗ ನಿರೋಧಕ ಮಾತ್ರೆಗಳಿರುವ ಕಿಟ್ ಇಟ್ಟುಕೊಂಡು ಸೋಂಕಿನ ಲಕ್ಷಣ ಇರುವವರಿಗೆ ಸ್ಥಳದಲ್ಲಿ ನೀಡುವಂತೆ ಆರೋ ಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಮಾತನಾಡಿ, ಕೊವೀಡ್ ಚೈನ್ ಲಿಂಕ್ ಕತ್ತರಿಸುವಲ್ಲಿ ಲಾಕ್‌ಡೌನ್ ಪಾತ್ರ ಬಹಳಷ್ಟಿದೆ.ಜಿಲ್ಲೆಯ ನಾಗರಿಕರು ಲಾಕ್‌ಡೌ ನ್ ಯಶಸ್ವಿಗೊಳಿಸಲು ಸಹಕಾರ ನೀಡಬೇಕು. ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ತುರ್ತು ವೈಧ್ಯಕೀ ಯ ಕಾರ್ಯ ನಿಮಿತ್ಯ ಜಿಲ್ಲೆಯೊಳಗೆ ಮತ್ತು ಅಂತರ ಜಿಲ್ಲಾ ಪ್ರವಾಸ ಮಾಡಲು ಅವಕಾಶವಿದೆ. ಸಂಬಂಧಿ ಸಿದ ವೈದ್ಯಕೀಯ ಅಗತ್ಯ ದಾಖಲೆಗಳನ್ನು ಹೊಂದಿ ದ್ದು,ಸ್ಥಳದಲ್ಲಿರುವ ಅಧಿಕಾರಿಗಳಿಗೆ ತೊರಿಸಬೇಕು. ಅವರು ದಾಖಲೆಗಳ ಕುರಿತು ಕ್ರಾಸ್ ಚೆಕ್ ಮಾಡಿ, ಅದು ನಿಜವಾಗಿದ್ದಲ್ಲಿ ಮಾತ್ರ ಅನುಮತಿ ನೀಡು ತ್ತಾರೆ. ಉಳಿದಂತೆ ಯಾವುದೇ ರೀತಿಯ ಪಾಸ್‌ಗ ಳನ್ನು ನೀಡಲಾಗುವುದಿಲ್ಲ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.ಅನಗತ್ಯ ಓಡಾಟ, ವಾಯು ವಿಹಾರ, ಕಾರಣವಿಲ್ಲದೆ ಹೊರಗೆ ಸಂಚರಿಸಿ ಲಾಕ್ ಡೌನ ನಿಯಮ ಉಲ್ಲಂಘಿಸಿದರೆ ಅಂತಹ ವಾಹನಗ ಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಲಾಗು ವುದು ಎಂದು ಪೊಲೀಸ್ ಆಯುಕ್ತ ಲಾಬೂರಾಮ ಅವರು ಹೇಳಿದರು.ವರ್ಚುವಲ್ ಸುದ್ಧಿಗೋಷ್ಠಿ ಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಪಾಲ್ಗೊಂಡಿದ್ದರು.
ಮಂಜುನಾಥ ಬಡಿಗೇರ (ಸೌಂದರ್ಯ) ಸುದ್ದಿ ಸಂತೆ ನ್ಯೂಸ್ ಧಾರವಾಡ